ಕಲಘಟಗಿ: ಸ್ಥಳೀಯ ತಾಲೂಕ ಪಂಚಾಯತ ಸಾಮಾನ್ಯ ಸಭೆಯಲ್ಲಿ ತಾ ಪಂ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ ಹಾಗೂ ತಹಶೀಲ್ದಾರ ಅಶೋಕ ಶಿಗ್ಗಾವಿ ಅವರ ನಡುವೆ ತಾಲೂಕಿನ ಕೆರೆ ಒತ್ತುವರಿ ವಿಚಾರಕ್ಕೆ ಮಾತಿನ ಜಟಾಪಟಿ ಜರುಗಿತು.
ತಾ ಪಂ ಅಧ್ಯಕ್ಷೆ ಸುನೀತಾ ಮ್ಯಾಗಿನಮನಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತಾ ಪಂ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ
ಕೆರೆಗಳ ಒತ್ತುವರಿ ಬಗ್ಗೆ ತಹಶೀಲ್ದಾರವರ ಜತೆಗೆ ತೀವ್ರ ಚರ್ಚೆ ನಡೆಸಿ ತಾಲೂಕಿನ ಕೆರೆ ತೆರವಿಗೆ ಏನು ಕ್ರಮಕೈಗೊಂಡಿದ್ದಿರಿ ತಿಳಿಸಿ ಪ್ರಶ್ನಿಸಿದರು.
ತಹಶೀಲ್ದಾರ ಅಶೋಕ ಶಿಗ್ಗಾವಿ ಮಾತನಾಡಿ,ತಾಲೂಕಿನಲ್ಲಿ 519 ಕೆರೆಗಳಿವೆ ಒತ್ತುವರಿಯಾದ ಕೆರೆಗಳ ದಾಖಲೆ ಹಾಗೂ ಮಾಹಿತಿ ನೀಡಿದರೆ ತಕ್ಷಣ ತೆರವು ಮಾಡಲಾಗುವುದು ಎಂದು ಸಭೆಗೆ ಸ್ಪಷ್ಟಪಡಿಸಿದರು.
ತಾ ಪಂ ಇ ಒ ಎಂ ಎಸ್ ಮೇಟಿ ಮಾತನಾಡಿ,ತಾಲೂಕಿನಕೆರೆಗಳ ಕುರಿತು ತಹಶೀಲ್ದಾರ ಅವರ ಅಭಿಪ್ರಾಯ ಪಡೆದು ಮುಂದಿನ ಸಭೆಯಲ್ಲಿ ನೀಡುವುದಾಗಿ ತಿಳಿಸಿದರು.ತಾ ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಈರಯ್ಯ ಸಿದ್ದಾಪೂರಮಠ ಹಾಗೂ ಸದಸ್ಯರು ಉಪಸ್ಥಿತರಿದ್ದರು.
Kshetra Samachara
07/02/2021 03:01 pm