ಮೂಡುಬಿದಿರೆ: ಮೂರು ದಿನಗಳ ಹಿಂದೆ ವಾಲ್ಪಾಡಿಯಲ್ಲಿ ನಡೆದ ನೇಮೋತ್ಸವ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ ನೀಡಿದ ಹೇಳಿಕೆ ಹಾಗೂ ಬಿಲ್ಲವ ಸಮುದಾಯದ ವ್ಯಕ್ತಿಯೊಬ್ಬರ ಜೊತೆ ನಡೆದ ಸಂಭಾಷಣೆ ಸಂದರ್ಭದಲ್ಲಿ ಹೇಳಿದ ಕೋಟಿ-ಚೆನ್ನಯ, ಬಿಲ್ಲವರ ವಿರುದ್ಧ ಹೇಳಿಕೆಗಳನ್ನು ಒಳಗೊಂಡ ಅಡಿಯೋ ವೈರಲ್ ಆಗುತ್ತಿದ್ದು, ಸಮುದಾಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ವಾಲ್ಪಾಡಿಗುತ್ತುವಿನಲ್ಲಿ ನಡೆದ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಭಾಷಣ ಮಾಡುವ ವೇಳೆ, ಪಟ್ಟ ಆದವರ ಕಾಲು ಹಿಡಿಯುತ್ತೇನೆ, ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎನ್ನುವ ಮಾತುಗಳು ವೈರಲ್ ಆಗಿತ್ತು.
ಈ ಕುರಿತು ಸ್ಪಷ್ಟನೆ ಕೇಳಿದ ಬಿಲ್ಲವ ಸಮುದಾಯ ವ್ಯಕ್ತಿಯೊಬ್ಬರು ಜಗದೀಶ ಅಧಿಕಾರಿ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಬಳಿಕ ಕಾಲ್ ಕಟ್ ಮಾಡದೆ, ತನ್ನ ಒಟ್ಟಿಗೆ ಇದ್ದವರ ಜೊತೆ ಮಾತನಾಡಿದ್ದಾರೆ. ವ್ಯಕ್ತಿಯೊಂದಿಗೆ ಮಾತನಾಡಿರುವ ಸಂಭಾಷಣೆಯ ಜೊತೆಗೆ ಅವರೊಟ್ಟಿಗೆ ಇದ್ದವರ ಬಳಿಯೂ ಮಾತನಾಡಿರುವುದು ಕೂಡ ರೆಕಾರ್ಡ್ ಆಗಿ, ವೈರಲ್ ಆಗಿದೆ.
ಜೊತೆಗಾರರೊಂದಿಗೆ ಮಾತನಾಡಿರುವ ಅಡಿಯೋ ದಾಖಲೆಯಲ್ಲಿ, ಬಿಲ್ಲವ ಸಮುದಾಯ ವಿರುದ್ಧ ಮಾತನಾಡಿರುವುದು, ಕೋಟಿ ಚೆನ್ನಯರ ಕಥೆಯನ್ನು ಅನ್ಯ ರೀತಿಯಲ್ಲಿ ಹೇಳಿರುವುದರಿಂದ ಬಿಲ್ಲವ ಸಮುದಾಯದವರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
05/02/2021 10:01 pm