ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಬೆಲವಂತರ ಗ್ರಾ ಪಂ ಅಧ್ಯಕ್ಷರಾಗಿ ಶಹನಾಜ ಕಲಂದರ ಉಗ್ನಿಕೇರಿ‌ ಅವಿರೋಧ ಆಯ್ಕೆ

ಕಲಘಟಗಿ:ತಾಲೂಕಿನ ಬೆಲವಂತರ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ಜರುಗಿದೆ. ಹಿಂದುಳಿದ ಅ ವರ್ಗದ ಮೀಸಲಾತಿಯಂತೆ ಅಧ್ಯಕ್ಷರಾಗಿ ಹನಮಾಪುರ ಗ್ರಾಮದ ಶ್ರೀಮತಿ ಶಹನಾಜ ಕಲಂದರ ಉಗ್ನಿಕೇರಿ‌ ಹಾಗೂ ಸಾಮಾನ್ಯ ಮೀಸಲಾತಿಯಂತೆ ಉಪಾಧ್ಯಕ್ಷರಾಗಿ ಬೆಲವಂತರ ಗ್ರಾಮದ ಗೀತಾ ಮಹಾದೇವಪ್ಪ ಬಸನಕೊಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಬೆಂಬಲಿಗರು ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಸನ್ಮಾನಿಸಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಂಕರಗಿರಿ ಬಾವನವರ,ಕಲಂದರ ಉಗ್ನಿಕೇರಿ,ಕಲ್ಲಯ್ಯ ಹಿರೇಮಠ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

05/02/2021 11:16 am

Cinque Terre

23.49 K

Cinque Terre

0

ಸಂಬಂಧಿತ ಸುದ್ದಿ