ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗುಡೇನಕಟ್ಟಿ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಅವಿರೋಧ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳೆರೆಡೂ ಇಂದು ಅವಿರೋಧವಾಗಿ ಆಯ್ಕೆಯಾಗಿವೆ.

ನಾಲ್ಕು ಗ್ರಾಮಗಳನ್ನು ಒಳಗೊಂಡಿದ್ದ ಗ್ರಾಮ ಪಂಚಾಯಿತಿ 15 ಸದ‌ಸ್ಯರ ಪೈಕಿ ಇಂದು ಚುನಾವಣಾ ಅಧಿಕಾರಿಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮತದಾನ ಪ್ರಕ್ರಿಯೆ ಆರಂಭಿಸಿದರು.

ಈ ವೇಳೆ ಯರಿನಾರಾಯಣಪುರದ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಸೊರಟೂರು ಒಬ್ಬರು ಮಾತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಕಂಡರು.

ಉಳಿದಂತೆ ಉಪಾಧ್ಯಕ್ಷ ಸ್ಥಾನ ಎಸ್.ಸಿ ಮೀಸಲಾತಿ ಕಂಡಿದ್ದು ಕಡಪಟ್ಟಿ ಗ್ರಾಮದ ಸರೋಜವ್ವ ಕಾಳೆ ಈ ಮೊದಲೇ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಬೆಂಬಲದಲ್ಲಿ ಯಾವ ಪಕ್ಷದ ಬಲಾಬಲ ಪರೋಕ್ಷವಾಗಿ ಕಾಣದಾಯಿತು.

ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಹಾರ ಹಾಕಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ ಕುರಣಿ, ಕಾರ್ಯದರ್ಶಿ ಕಲ್ಲಪ್ಪ ಹಾಗೂ ರೈತ ಮುಖಂಡ ಬಸವರಾಜ ಯೋಗಪ್ಪನವರ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

03/02/2021 05:05 pm

Cinque Terre

20.02 K

Cinque Terre

0

ಸಂಬಂಧಿತ ಸುದ್ದಿ