ಹುಬ್ಬಳ್ಳಿ: ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಯ್ಕೆ ಪ್ರಕ್ರಿಯೆ ನಿಲ್ಲಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಮತದಾರ ಪಟ್ಟಿಯಲ್ಲಿ ಅಕ್ರಮ ಹೆಸರು ಸೇರ್ಪಡೆಯಾಗಿದ್ದರಿಂದ ಕಳೆದ ಭಾರಿ ಪಂಚಾಯತಿ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದರು.ಹೀಗಾಗೀ ತಮ್ಮ ಗ್ರಾಮದ ಚುನಾವಣೆಯೇ ಆಗಿಲ್ಲ ಬೇರೆ ಗ್ರಾಮಗಳಿಂದ ಆಯ್ಕೆಯಾದ ಸದಸ್ಯರನ್ನಿಟ್ಟುಕೊಂಡು ಅಧ್ಯಕ್ಷ ಉಪಾಧ್ಯಕ್ಷ ಮಾಡುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಕಟ್ನೂರು ಗ್ರಾಮ ಪಂಚಾಯತಿಗೆ ನಾಲ್ಕು ಹಳ್ಳಿಗಳು ಬರುತ್ತೆವೆ. ಹೀಗಾಗಿ ಉಳಿದ ಮೂರು ಹಳ್ಳಿಗಳ ಸದಸ್ಯರನ್ನು ಇಟ್ಟುಕೊಂಡು ಇಂದು ಜಿಲ್ಲಾಡಳಿತ ಆಯ್ಕೆ ಪ್ರಕ್ರಿಯೆ ನಡೆಸಿತ್ತು ಇದನ್ನು ಗ್ರಾಮಸ್ಥರು ತೀವ್ರವಾಗಿ ಖಂಡಿಸಿದರು.
Kshetra Samachara
03/02/2021 03:32 pm