ಧಾರವಾಡ :13 ನೇ ವಾರ್ಡ,ಭಾವಿಕಟ್ಟಿ ಪ್ಲಾಟ್, ಮಕಡವಾಲೆ ಪ್ಲಾಟ್, ನಾಯಕವಾಡಿ ಪ್ಲಾಟ್ ಮುಂತಾದವುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ರಾಣಿ ಚನ್ನಮ್ಮ ಬ್ಲಾಕ್, ಹು -ಧಾ ಮಹಾನಗರ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಗೌರಮ್ಮ ನಾಡಗೌಡ್ರ ಇವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಹಲವಾರು ಸಮಸ್ಯೆಗಳು ಭಾವಿಕಟ್ಟಿಪ್ಲಾಟ , ಮಾಕಡವಾಲೆ ಪ್ಲಾಟ,ನಾಯಕವಾಡಿ ಪ್ಲಾಟ , ಜಲದರ್ಶಿನಿ ನಗರ ಇವುಗಳಲ್ಲಿ ರಸ್ತೆಗಳಿಲ್ಲದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ . ಗಟಾರುಗಳು ಸ್ವಚ್ಚತೆ ಇಲ್ಲದೇ ರೋಗ ರುಜನೆಗಳು ಹರಡುತ್ತಿವೆ . ಮಳೆಗಾಲದಲ್ಲಿ ಮಳೆಯ ನೀರು ಮನೆಯೊಳಗೆ ನುಗ್ಗುತ್ತವೆ ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳೇ ಇಲ್ಲ ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
31/01/2021 01:46 pm