ಧಾರವಾಡ: ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ತರ್ಲಘಟ್ಟ ಗ್ರಾಮಸ್ಥರು ಧಾರವಾಡದ ಜಿಲ್ಲಾ ಪಂಚಾಯ್ತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತರ್ಲಘಟ್ಟ ಗ್ರಾಮ ಪಂಚಾಯ್ತಿಯಲ್ಲಿ ಸುಮಾರು 4 ಕೋಟಿಯಷ್ಟು ಅವ್ಯವಹಾರವಾಗಿದ್ದು, ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಯಾವುದೇ ಕಾಮಗಾರಿಯಾಗದಿದ್ದರೂ ಫೇಕ್ ಬಿಲ್ ತೆಗೆದಿದ್ದಾರೆ. ಇನ್ನು ಶೌಚಾಲಯ ಕಟ್ಟಿಸುವ ಹೆಸರಿನಲ್ಲೂ ಬಿಲ್ ತೆಗೆದಿದ್ದು ಜನರಿಗೆ ಅಧಿಕಾರಿಗಳು ಮೋಸ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಇಷ್ಟೆಲ್ಲ ಅವ್ಯವಹಾರ ಆಗಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು ಏಕೆ? ಎಂದು ಪ್ರಶ್ನಿಸಿದ ಗ್ರಾಮಸ್ಥರು, ಪಂಚಾಯ್ತಿ ಅಧಿಕಾರಿಗಳು ಒಬ್ಬ ವ್ಯಕ್ತಿ ಹೆಸರಿನಲ್ಲಿ ಮೂರು ಮನೆ ಬಿಲ್ ತೆಗೆದುಕೊಂಡಿದ್ದಾರೆ ಕೂಡಲೇ ಇಂತವರ ವಿರುದ್ಧ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
Kshetra Samachara
25/01/2021 06:52 pm