ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಕಿಡಿ ಕಾರಿದ ಬಸವರಾಜ್ ಹೊರಟ್ಟಿ..

ಹುಬ್ಬಳ್ಳಿ: ಮೂರುಸಾವಿರಮಠದ ಆಸ್ತಿ ವಿವಾದ ಕುರಿತಂತೆ ಉನ್ನತ ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ದಿಂಗಾಲೇಶ್ವರ ಶ್ರೀಗಳ ವಿರುದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಿಡಿಕಾರಿದರು.

ನಗರದಲ್ಲಿಂದು ಮಾತನಾಡಿದ ಅವರು,ನಾನು ಮಠದ ಉನ್ನತ ಸಮಿತಿ ಸದಸ್ಯ. ಸ್ವಾಮೀಜಿಗಳು, ದೊಡ್ಡವರು . ಅವರ ಬಾಯಲ್ಲಿ ಯಾವ ರಕ್ತದಲ್ಲಿ ಹುಟ್ಟಿದ್ದಾರೆ ಎಂಬ ಮಾತುಗಳನ್ನಾಡಿದ್ರೆ ನಾನು ಉತ್ತರ ಕೊಡಲ್ಲ.ಮಠದಿಂದ ತಪ್ಪಾಗಿದ್ರೆ ಸರಿಪಡಿಸುತ್ತೇವೆ. ಸಾಮಾನ್ಯ ವ್ಯಕ್ತಿ ಹೇಳಿದ್ರು ಸಹ ಸರಿ ಮಾಡ್ತಿವಿ. ಈಗಾಗಲೇ ಮಠದ ಉನ್ನತ ಸಮಿತಿ ಸಭೆ ಕರೆಯುವಂತೆ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಹೇಳಿದ್ದೇನೆ.

ಕೆಎಲ್ ಇ ಸಂಸ್ಥೆಗೆ ಭೂಮಿ ನೀಡಿದ್ದು,ಎಲ್ಲ ಪಕ್ಷದವರು , ಎಲ್ಲಾ ಮಠಾಧೀಶರು ಸೇರಿ ದೊಡ್ಡ ಸ್ವಾಮಿಜಿಗಳು ಇದ್ದಾಗ ನಿರ್ಧಾರ ಆಗಿದ್ದು,ಮೆಡಿಕಲ್ ಕಾಲೇಜು ಕಟ್ಟಲು ಕೆಎಲ್ ಇ ಸಂಸ್ಥೆಗೆ ನೀಡಿದ ಭೂಮಿಯನ್ನು ಮರಳಿ ಪಡೆಯುವ ವಿಚಾರ ನಮ್ಮ ಮುಂದಿಲ್ಲ ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವರು ಸ್ವತಂತ್ರ, ಅದಕ್ಕೆ ನಾವು ಉತ್ತರ ಕೊಡುವುದಿಲ್ಲ ಎಂದರು.

Edited By : Manjunath H D
Kshetra Samachara

Kshetra Samachara

25/01/2021 06:23 pm

Cinque Terre

41.73 K

Cinque Terre

2

ಸಂಬಂಧಿತ ಸುದ್ದಿ