ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠ.ಈ ಮಠದಲ್ಲಿ ಆಸ್ತಿ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.ಅಲ್ಲದೇ ಈ ಮಠದ ಉನ್ನತ ಮಟ್ಟದ ಸಮಿತಿಯ ವಿರುದ್ಧ ಸ್ವಾಮೀಜಿಯೊಬ್ಬರು ತೊಡೆ ತಟ್ಟಿ ಸವಾಲೊಡ್ಡಿದ್ದಾರೆ.ಅಷ್ಟಕ್ಕೂ ಯಾವುದು ಆ ಮಠ..ಸ್ವಾಮೀಜಿ ಸವಾಲೊಡ್ಡಿದ್ದಾದರೂ ಯಾಕೆ ಅಂತೀರಾ ಈ ಸ್ಟೋರಿ ನೋಡಿ...
ವಾಣಿಜ್ಯನಗರಿ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಮತ್ತೆ ಆಸ್ತಿ ವಿವಾದ ಭುಗಿಲೆದ್ದಿದೆ.ಮಠದ ಉನ್ನತ ಮಟ್ಟದ ಸಮಿತಿ ವಿರುದ್ಧ ಬಾಲೆಹೊಸರಿನ ದಿಂಗಾಲೇಶ್ವರ ಶ್ರೀಗಳು ತೊಡೆ ತಟ್ಟಿದ್ದಾರೆ.ಮಠದ ಆಸ್ತಿಯನ್ನು ಕೆಎಲ್ಇ ಸಂಸ್ಥೆಗೆ ನೀಡುವ ಕುರಿತು ವಿರೋಧ ವ್ಯಕ್ತಪಡಿಸಿದ್ದ ದಿಂಗಾಲೇಶ್ವರ ಸ್ವಾಮೀಜಿ ಉನ್ನತ ಮಟ್ಟದ ಸಮಿತಿಗೆ ಸವಾಲೊಡ್ಡಿದ್ದಾರೆ.ಈ ಮೂರು ಸಾವಿರಮಠದ ಆಸ್ತಿ, ಇದು ಸಮಾಜದ ಆಸ್ತಿ, ನಿಮ್ಮಪ್ಪನ ಆಸ್ತಿ ಅಲ್ಲ.ಕೆಎಲ್‌ಇ ಸಂಸ್ಥೆಗೆ ನೀಡಿದ ಮೂರು ಸಾವಿರ ಮಠದ ಆಸ್ತಿಯನ್ನ, ಮಠಕ್ಕೆ ಮರಳಿಸಬೇಕು.ಇಲ್ಲವಾದ್ರೆ ಬರುವ ದಿನಗಳಲ್ಲಿ ಇದರ ದುಃಖವನ್ನ ನೀವು ಅನುಭವಿಸುತ್ತಿರಿ.ಉನ್ನತ ಮಟ್ಟದ ಸಮಿತಿಯವರು ಮೂರು ಸಾವಿರ ಮಠವನ್ನ ನಾಶ ಮಾಡಿದ್ದಾರೆ.ಉನ್ನತ ಮಟ್ಟದ ಸಮಿತಿಗೆ ನಾಚಿಗೆಯಾಗಬೇಕು, ನಿಮ್ಮ ಮನೆತನದ ಸಂಬಂಧಿಸಿದ ಆಸ್ತಿ ಇರಲ್ಲಿಲ್ಲವೇನೂ.ಆ ಆಸ್ತಿಯಲ್ಲಿ ನೀವು ಮೆಡಿಕಲ್ ಕಾಲೇಜು ಕಟ್ಟಿಕೊಳ್ಳಬೇಕಿತ್ತು ಎಂದು ಶ್ರೀಗಳು ಉನ್ನತ ಮಟ್ಟದ ಸಮಿತಿಯ ವಿರುದ್ಧ ಆಕ್ರೋಶಗೊಂಡಿದ್ದಾರೆ.
ನನ್ನ ಬಗ್ಗೆ ತಾಕತ್ತಿದ್ದರೆ ಬಹಿರಂಗವಾಗಿ ಬಂದು ಅಪಪ್ರಚಾರ ಮಾಡಿ.ನನ್ನ ಬಗ್ಗೆ ಅಪಪ್ರಚಾರ ಮಾಡುವವರಿಗೆ ಪಂಥಾ ಆಹ್ವಾನ ಕೋಡ್ತೆನಿ, ನಾನು ಎಲ್ಲವನ್ನೂ ಸಾಬೀತುಪಡಿಸುತ್ತೆನೆ.ನಿಮ್ಮಲ್ಲಿ ತಂದೆ-ತಾಯಿ ರಕ್ತ ಇದ್ದರೆ, ಅದು ಏನಾದ್ರೂ ಓರಿಜನಾಲಾಟಿ ನಿಮ್ಮಲ್ಲಿ ಇದ್ದರೆ ಬಹಿರಂಗವಾಗಿ ತೋರಿಸಿ.ಎಲ್ಲದಕ್ಕೂ ನಾನು ಸಿದ್ದನಿದ್ದೇನೆ, ಆಗಿದ್ದಾಗಲಿ.
ದಿಂಗಾಲೇಶ್ವರ ಶ್ರೀ ಉನ್ನತ ಮಟ್ಟದ ಸಮೀತಿಗೆ ಬಹಿರಂಗವಾಗಿ ಸವಾಲ್ ಹಾಕಿದ್ದು,ಉನ್ನತ ಮಟ್ಟದ ಸಮಿತಿಯಲ್ಲಿ ಉಸ್ತುವಾರಿ ಮಂತ್ರಿಗಳಿದ್ದಾರೆ, ಗೃಹ ಮಂತ್ರಿಗಳಿದ್ದಾರೆ, ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆಗಾರ ಇದ್ದಾರೆ, ಇವರೆಲ್ಲಾ ಸೇರಿ ಮೂರು ಸಾವಿರ ಮಠದ ಅಸ್ತಿಯನ್ನು ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿದ್ದಾರೆ.ಮಠದ ಆಸ್ತಿ ಹಾಳಾಗಲಿಕ್ಕೆ ವಿರೋಧ ಪಕ್ಷದವರು ಸಹಕಾರ ಕೋಡ್ತಾ ಇದ್ದಾರೆ. ಇದು ತಪ್ಪೆಂದು ನಾನು ಹೇಳ್ತಾ ಇದೇನಿ ಎಂದು ಶ್ರೀಗಳು ಬಹಿರಂಗ ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆಗಾರರು ಇರುವವರು ಸುಪ್ರೀಂ ಕೋರ್ಟ್‌ನ ಆದೇಶವನ್ನ ತಿರುಚಿದ್ದಾರೆ.ಆದೇಶ ತಿದ್ದುಪಡಿ ಮಾಡಿ ಆಸ್ತಿ ಕೊಡಿಸುವ ಮುಂದಾಳತ್ವವನ್ನು ವಹಿಸುವುದು ಸರೀನಾ..?ಈ ಸಮಾಜ ಇದ್ದನ್ನ ಗಮನಿಸಿಬೇಕು. ಈಗಿರುವ ಸರ್ಕಾರದಲ್ಲಿ ಬಹಳ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಈ ಕೆಲಸ ಮಾಡಿದ್ದಾರೆನ್ನುವದಕ್ಕೆ ಜನರು ಇದಕ್ಕೆ ವಿರೋಧ ಮಾಡಲು ಹೆದರುತ್ತಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಗಂಭೀರವಾಗಿ ಆರೋಪ ಮಾಡುವ ಮೂಲಕ ಸವಾಲೊಡ್ಡಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ಶೀತಲ ಸಮರದಲ್ಲಿದ್ದ ಮೂರುಸಾವಿರಮಠದ ಆಸ್ತಿ ವಿವಾದ ಈಗ ತಾರಕಕ್ಕೆ ಏರಿದ್ದು,ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.
Kshetra Samachara
25/01/2021 03:51 pm