ಕಲಘಟಗಿ: ಶಾಸಕ ಸಿ ಎಂ ನಿಂಬಣ್ಣವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಶೀಲನಾ ಸಭೆ ಸೋಮವಾರ ನಡೆಸಲಾಯಿತು.
ತಾಲೂಕಿನ ಅಂಗನವಾಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಶಾಸಕ ಸಿ ಎಂ ನಿಂಬಣ್ಣವರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.ಕಂದಾಯ ಇಲಾಖೆಯಲ್ಲಿ ಜನರ ಕೆಲಸ ಕಾರ್ಯ ಮಾಡುವಲ್ಲಿ ವಿಳಂಬ ಧೋರಣೆಯನ್ನು ಮಾಡದೇ ಜನರ ಆಗತ್ಯ ಕೆಲಸವನ್ನು ಸರಿಯಾಗಿ ಮಾಡಲು ಹಾಗೂ ಸಮಯಕ್ಕೆ ಸರಿಯಾಗಿ ಹಾಜರಾಗದ,ಸರಿಯಾಗಿ ಕೆಲಸ ಮಾಡದ ಸಿಬ್ಬಂದಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳಲು ತಹಶೀಲ್ದಾರ ಅಶೋಕ ಶಿಗ್ಗಾವಿ ಅವರಿಗೆ ತಿಳಿಸಿದರು.
ತಹಶೀಲ್ದಾರ ಅಶೋಕ ಶಿಗ್ಗಾವಿ ಮಾತನಾಡಿ,ಸಿಬ್ಬಂದಿ ಹಾಜರಾತಿಗೆ ಬಯೋ ಮೆಟ್ರಿಕ್ ಅಳ್ವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.ತಾ ಪಂ ಅಧ್ಯಕ್ಷೆ ಸುನೀತಾ ಮೇಲಿನಮನಿ,ಉಪಾಧ್ಯಕ್ಷ ಚಂದ್ರಗೌಡ,ಇ ಒ ಎಂ ಎಸ್ ಮೇಟಿ ಹಾಗೂ ಕೆಡಿಪಿ ನಾಮನಿರ್ದೇಶಿತ ಸದಸ್ಯರು,ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
25/01/2021 02:26 pm