ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಕುಸುಗಲ್ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಲು ಸನ್ಮಾನ

ಹುಬ್ಬಳ್ಳಿ- ಕುಸುಗಲ್ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಲು ಸನ್ಮಾನ

ಸಿದ್ದಗಂಗಾ ಡಾ.ದಿ ಶಿವು ಕುಮಾರ್ ಸ್ವಾಮಿ, ಪುಣ್ಯ ಅಂಬಿಗರ ಚೌಡಯ್ಯ ಜಯಂತಿ ಹಿನ್ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಸನ್ಮಾನ ಮಾಡುವ ಮೂಲಕ ಆತ್ಮ ಸ್ಥೈರ್ಯ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು...

ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ಗಂಗಾಧರ ನಗರದಲ್ಲಿನ ಜಗದ್ಗುರು ಗಂಗಾಧರ ಸ್ವಾಮಿ ಮಠದಲ್ಲಿ ನಡೆದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ, ಸನ್ಮಾನ ಮಾಡಿ ಅವರಿಗೆ ಸೋಲು ಗೆಲುವಿನ ಮೆಟ್ಟಿಲು, ಯಾರು ಕುಗ್ಗುವ ಅವಶ್ಯಕತೆ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಗ್ರಾಮವನ್ನು ಅಭಿವೃದ್ಧಿದತ್ತ ಗಮನ ಹರಿಸೋಣ ಎಂದು ಅಖಿಲ್ ಭಾರತ ವೀರಶೈವ ಮಹಸಭಾ ಹುಬ್ಬಳ್ಳಿ ಗ್ರಾಮೀಣ ಘಟದ ಅದ್ಯಕ್ಷ ರಮೇಶ್ ಚವಣ್ಣವರ ವಿನಂತಿಸಿದರು...

ಗೆದ್ದ ಅಭ್ಯರ್ಥಿಗಳಿಗೆ ಸನ್ಮಾನ ಮಾಡಲು ನೂರಾರು ಜನರು ಇರುತ್ತಾರೆ, ಆದ್ರೆ ಸೋತ ಅಭ್ಯರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಲು ಯಾರು ಇರುವುದಿಲ್ಲ ಇಂತಹ ಸಂದರ್ಭದಲ್ಲಿ ನಮಗೆ ಧೈರ್ಯ ಜೊತೆಗ ಸೋಲೆ ಗೆಲುವಿನ ಮೂಲ ಎಂದು ತಿಳಿ ಹೇಳುವ ಕೆಲಸ ಅಖಿಲ ಭಾರತ ಮಹಾಸಭಾ ಸದಸ್ಯರು ಸನ್ಮಾನ ಮಾಡಿದ್ದು ಸಂತೋಷ ತಂದಿದೆ..

Edited By : Manjunath H D
Kshetra Samachara

Kshetra Samachara

22/01/2021 06:50 pm

Cinque Terre

38.92 K

Cinque Terre

3

ಸಂಬಂಧಿತ ಸುದ್ದಿ