ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಜಕೀಯ ದುರುದ್ದೇಶಕ್ಕೆ ಬಿ.ಆರ್.ಟಿ.ಎಸ್ ಬಳಕೆ ಮಾಡುತ್ತಿರುವ ಅರವಿಂದ ಬೆಲ್ಲದ:ನಾಗರಾಜ್ ಗೌರಿ ಆರೋಪ...

ಹುಬ್ಬಳ್ಳಿ: ಆಡಳಿತ ಪಕ್ಷದ ಶಾಸಕರೇ ಬಿ‌.ಆರ್.ಟಿ‌.ಎಸ್ ಸಾವಿನ ರಸ್ತೆ ಎಂದು ಕರೆದಿದ್ದಾರೆ. ಹೀಗಾಗಿ ಬಿಅರ್ ಟಿ ಎಸ್ ಯೋಜನೆಯನ್ನು ರದ್ದು ಮಾಡಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ನಾಗರಾಜ್ ಗೌರಿ ಆರೋಪಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ಬಿ ಆರ್ ಟಿ ಎಸ್ ಯೋಜನೆ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ದಾರೆ. ಕಾಮಗಾರಿ ಆರಂಭದಿಂದ ಮುಗಿಯುವರಗೂ ಶಾಸಕರಾಗಿದ್ದ ಇವರು ಸ್ಥಳಿಯ ಸಮಸ್ಯೆಗಳಿಗೆ ಧ್ವನಿ ಎತ್ತದೆ ಇವರು ಏಕಾಏಕಿ ಅಪಸ್ವರ ಎತ್ತಿದ್ದರ ಹಿಂದೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಎನ್ನುವದರಲ್ಲಿ ಅನುಮಾನವಿಲ್ಲ ಎಂದರು.

ನಾಲ್ಕು ತಿಂಗಳ ಹಿಂದೆ ಬಿ ಆರ್ ಟಿ ಎಸ್ ಕಳಪೆ ಕಾಮಗಾರಿ ಬಗ್ಗೆ ದೂರು ನೀಡಿದ್ದರು. ಇದುವರೆಗೂ ಯಾವುದೇ ಕ್ರಮ ಆಗದಿರುವುದನ್ನು ನೋಡಿದರೆ ಇದು ಕಾಟಾಚಾರದ ದೂರು ಎನಿಸುತ್ತದೆ. ಕಳೆಪ ಕಾಮಗಾರಿ ಮಾಡಿದ ಅಧಿಕಾರಿಗಳಿಂದಲೇ ತನಿಖೆ ನಡೆಸುತ್ತಿರುವುದು ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಎಂದು ಆರೋಪಿಸಿದರು.

ರಾಜಕೀಯಕ್ಕಾಗಿ ಈಗ ಬಿ ಆರ್ ಟಿ ಎಸ್ ಯೋಜನೆ ಬಳಸಿಕೊಳ್ಳುತ್ತಿರುವ ಅರವಿಂದ ಬೆಲ್ಲದ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

22/01/2021 05:33 pm

Cinque Terre

25.26 K

Cinque Terre

3

ಸಂಬಂಧಿತ ಸುದ್ದಿ