ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪುರಸಭೆಯ ಮುಖ್ಯಾಧಿಕಾರಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆಗಿಳಿದ ನವಲಗುಂದ ಪುರಸಭೆ ಸಿಬ್ಬಂದಿಗಳು

ನವಲಗುಂದ : ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪುರಸಭೆಯ ಮುಖ್ಯಾಧಿಕಾರಿ ಮೇಲೆ ಹಲ್ಲೆ ನಡೆಸಲಾಗಿದ್ದು ಖಂಡನಿಯ ಇದಕ್ಕೆ ಸರ್ಕಾರ ನ್ಯಾಯ ಒದಗಿಡಬೇಕು ಎಂದು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ನವಲಗುಂದ ತಹಸೀಲ್ದಾರ್ ಗೆ ಮನವಿಯನ್ನು ಸಲ್ಲಿಸಲಾಯಿತು.

ನಕಲಿ ಬಿಲ್ಲು ಪಾವತಿ ಮಾಡುವಂತೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪುರಸಭೆಯ ಮುಖ್ಯಾಧಿಕಾರಿಯಾದ ಅಭಯ ಕುಮಾರ ಅವರಿಗೆ ಪುರಸಭೆ ಸದಸ್ಯರಾದ ಆನಂದಕುಮಾರ ಟೈಗರ್‌ ಮತ್ತು ಶಶಿಕುಮಾರ ಮೇತ್ರಿ ಎನ್ನುವವರು ಒತ್ತಾಯಿಸಿದ್ದರಂತೆ, ಇದಕ್ಕೆ ಒಪ್ಪದ ಮುಖ್ಯಾಧಿಕಾರಿ ಅಭಯಕುಮಾರ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ನವಲಗುಂದ ಪುರಸಭೆಯ ವತಿಯಿಂದ ಇಂದು ಪ್ರತಿಭಟಿಸಿ, ತಹಸೀಲ್ದಾರ್ ಗೆ ಮನವಿಯನ್ನು ಸಲ್ಲಿಸಲಾಯಿತು.

Edited By : Manjunath H D
Kshetra Samachara

Kshetra Samachara

22/01/2021 05:15 pm

Cinque Terre

23.96 K

Cinque Terre

0

ಸಂಬಂಧಿತ ಸುದ್ದಿ