ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾನು ಟೋಲ್ ಕಟ್ಟೋದಿಲ್ಲ..ಅರೆಸ್ಟ್ ಮಾಡಿ...

ಧಾರವಾಡ: ಧಾರವಾಡದ ನರೇಂದ್ರ ಟೋಲ್ ಗೇಟ್ ನಿಂದ ಗಬ್ಬೂರು ಕ್ರಾಸ್ ವರೆಗೆ ರಸ್ತೆ ಅಗಲೀಕರಣ ಆಗುವವರೆಗೂ ನಾನು ಟೋಲ್ ಕಟ್ಟೋದಿಲ್ಲ ಹಾಗೇ ಅಡ್ಡಾಡುತ್ತೇನೆ. ನನ್ನನ್ನು ಅರೆಸ್ಟ್ ಮಾಡಿದರೂ ಚಿಂತೆ ಇಲ್ಲ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಇಮ್ರಾನ್ ಕಳ್ಳಿಮನಿ ಸವಾಲು ಹಾಕಿದರು.

ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಧಾರವಾಡದ ರಮ್ಯಾ ರೆಸಿಡೆನ್ಸಿ ಬಳಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಖೇಣಿ ಅವರು 25 ವರ್ಷದಿಂದ ಈ ರಸ್ತೆಯನ್ನು ಗುತ್ತಿಗೆ ಪಡೆದಿದ್ದಾರೆ. ಈ ರಸ್ತೆ ಸಾವಿನ ಕೂಪವಾಗಿ ಪರಿಗಣಿಸಿದೆ. ಎಲ್ಲಿಯವರೆಗೆ ನೀವು ಈ ರಸ್ತೆಯನ್ನು ಅಗಲೀಕರಣ ಮಾಡುವುದಿಲ್ಲವೋ ಅಲ್ಲಿಯವರೆಗೆ ನಾನು ಟೋಲ್ ಕಟ್ಟೋದಿಲ್ಲ ಎಂದಿದ್ದಾರೆ.

ಖೇಣಿ ಅವರೇ ನಿಮ್ಮ ಕುಟುಂಬದವರೇ ಈ ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದರೆ ಏನು ಮಾಡ್ತಿದ್ರಿ? ಎಂದು ಪ್ರಶ್ನಿಸಿದ ಇಮ್ರಾನ್, ಈ ಭಾಗದ ಕೇಂದ್ರದ ಸಚಿವರು ಕೂಡಲೇ ಈ ಬಗ್ಗೆ ಕಾಳಜಿ ವಹಿಸಿ ರಸ್ತೆ ಅಗಲೀಕರಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

18/01/2021 06:37 pm

Cinque Terre

47.03 K

Cinque Terre

9

ಸಂಬಂಧಿತ ಸುದ್ದಿ