ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತರ್ಲಘಟ್ಟದಲ್ಲಿ ಸತ್ಯಾಗ್ರಹ ತೀವ್ರ, ಅಧಿಕಾರಿ ಶಾಸಕರಿಗೆ ಘೇರಾವ್

ಕುಂದಗೋಳ : ತಾಲೂಕಿನ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ 14ನೇ ಹಣಕಾಸು ಸೇರಿದಂತೆ ಇತರೆ ಅವ್ಯವಹಾರದ ತನಿಖೆಗೆ ಆಗ್ರಹಿಸಿ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ದಣ್ಣ ಕಳಸಣ್ಣನವರ ಹಾಗೂ ಗ್ರಾಮಸ್ಥರು ಕೈಗೊಂಡ ಉಪವಾಸ ಸತ್ಯಾಗ್ರಹ ಎರಡನೇ ದಿನವು ಮುಂದುವರೆಯಿತು.

ಶುಕ್ರವಾರ ಬೆಳಿಗ್ಗೆಯಿಂದ ಆರಂಭವಾದ ಸತ್ಯಾಗ್ರಹಕ್ಕೆ ನಿನ್ನೆ ತಾ.ಪಂ ಅಧಿಕಾರಿಗಳು ಪ್ರತಿಭಟನಾ ನಿರತರನ್ನು ಮನ ಓಲಿಸಿದರು ಸತ್ಯಾಗ್ರಹ ಕೈ ಬಿಡದ ಗ್ರಾಮಸ್ಥರು, ಇಂದು ಕರ್ನಾಟಕ ರಕ್ಷಣಾ ವೇದಿಕೆ ಜೊತೆಗೂಡಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದರು.

ಬು.ತರ್ಲಘಟ್ಟದ ಪ್ರತಿಭಟನೆಯ ಕೂಗಿಗೆ ಸ್ಥಳಕ್ಕೆ ಆಗಮಿಸಿದ ಶಾಸಕಿ ಕುಸುಮಾವತಿ ತಹಶೀಲ್ದಾರ ಬಸವರಾಜ ಮೆಳವಂಕಿ ಹಾಗೂ ತಾ.ಪಂ ಅಧಿಕಾರಿಗಳನ್ನು ತಡೆದ ಪ್ರತಿಭಟನಾಕಾರರು ಒಬ್ಬ ವ್ಯಕ್ತಿ ಕೊಟ್ಟ ಅರ್ಜಿಗೆ ಇಂದಿಗೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ,

ಈಗಾಗಲೇ ಹೋರಾಟ ನಡೆಸಿದ ಸಿದ್ದಣ್ಣ ಕಳಸಣ್ಣನವರಿಗೆ ಬೆದರಿಕೆ ಕರೆ, ಹಣದ ಆಮಿಷ ಒಡ್ಡಿದವರಿಗೆ ಸೂಕ್ತ ಕ್ರಮ ಜರುಗಿಸಿಲ್ಲ. ಈ ರೀತಿ ಆದರೆ ಸತ್ಯಕ್ಕೆ ಜಯ ಯಾವಾಗ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಕಲ್ಲಪ್ಪ ಹರಕುಣಿ ಪ್ರಶ್ನಿಸಿದರು.

ಸತತ ಎರೆಡು ಗಂಟೆಗಳಿಗೂ ಅಧಿಕ ಕಾಲ ತಹಶೀಲ್ದಾರ ಸಮ್ಮುಖದಲ್ಲಿ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ಅವ್ಯವಹಾರದ ಬಗ್ಗೆ ತನಿಖೆ ವಿಚಾರಣೆ ನಡೆಸಿದ ಶಾಸಕಿ ತಹಶೀಲ್ದಾರರಿಗೆ ಸೂಕ್ತ ಕ್ರಮ ಜರುಗಿಸಲು ತಿಳಿಸಿದಾಗ

ಗ್ರಾಮಸ್ಥರು ಇಂದೇ ಸಮಸ್ಯೆ ಬಗೆ ಹರಿಸುವಂತೆ ಶಾಸಕರಿಗೆ ಘೇರಾವ್ ಹಾಕಿದ ಪ್ರಸಂಗವು ನಡೆಯಿತು.

ಬಳಿಕ ತಹಶೀಲ್ದಾರ ಗ್ರಾಮಸ್ಥರ ವಾದ ವಿವಾದ ಆಲಿಸಿ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ಅವ್ಯವಹಾರದ ಆರೋಪದ ಅಡಿ ಒಬ್ಬ ಪಿಡಿಓ ಅಮಾನತಿಗೆ ಆದೇಶಿಸಿದರು ಎಲ್ಲ ಅಧಿಕಾರಿಗಳ ಅಮಾನತಿಗೆ ಪಟ್ಟು ಹಿಡಿದ ಗ್ರಾಮಸ್ಥರು ಮತ್ತೆ ಪ್ರತಿಭಟನೆ ನಡೆಸಿದ್ದು ಶಾಸಕಿ ಕುಸುಮಾವತಿ ಸಹ ಗ್ರಾಮಸ್ಥರಿಗೆ ರಾತ್ರಿಯಾದ್ರೂ ಸಾಥ್ ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

16/01/2021 07:09 pm

Cinque Terre

50.43 K

Cinque Terre

0

ಸಂಬಂಧಿತ ಸುದ್ದಿ