ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯಡಿಯೂರಪ್ಪ ಈಗ ನಾಲಿಗೆ ಕಳೆದುಕೊಂಡ ನಾಯಕ- ಹೆಚ್ ವಿಶ್ವನಾಥ ವಾಗ್ದಾಳಿ...

ಹುಬ್ಬಳ್ಳಿ: ಇವತ್ತಿಗೂ ಯಡಿಯೂರಪ್ಪ ನವರ ಬಗ್ಗೆ ನನಗೆ ಕಳಕಳಿ ಇದೆ. ಅವರ ಬಗ್ಗೆ ನನಗೆ ಗೌರವ ಇತ್ತು. ಆದ್ರೆ ಈಗ ಯಡಿಯೂರಪ್ಪ

ನಾಲಿಗೆ ಕಳೆದುಕೊಂಡ ನಾಯಕ, ಮಾತು ತಪ್ಪಿದ ನಾಯಕ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಮೋದಿ ಕುಟುಂಬ ರಾಜಕಾರಣ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ.ಕುಟುಂಬ ರಾಜಕಾರಣ ದೇಶವನ್ನು ಕಿತ್ತು ತಿನ್ನುತ್ತಿದೆ ಯಡಿಯೂರಪ್ಪ ಕುಟುಂಬದ ರಾಜಕಾರಣ ಅತಿಯಾಗಿದೆ.ಯಡಿಯೂರಪ್ಪ ಮಗ ವಿಜಯೇಂದ್ರ ಇಲ್ವಾ..?

ರಾಘವೇಂದ್ರ ಎಂ.ಪಿ ಇದ್ದಾರೆ. ಯಡಿಯೂರಪ್ಪ ಕುಟುಂಬ ಹೆಣ್ಣುಮಕ್ಕಳು ರಾಜಕಾರಣದಲ್ಲಿ ಭಾಗಿಯಾಗುತ್ತಿಲ್ವಾ.?

ಈಶ್ವರಪ್ಪನ ಸಹ ಕುಟುಂಬ ರಾಜಕಾರಣದಿಂದ ಹೊತರಾಗಿಲ್ಲ.ಕುಟುಂಬ ರಾಜಕಾರಣವೇ ಭ್ರಷ್ಟಾಚಾರವನ್ನು ಪೋಷಿಸುತ್ತಿದೆ.

ಅಮಿತ್ ಶಾ ಮಗನ ವಿಚಾರದಲ್ಲಿ ಮೋದಿ ಸಹ ಬೇಸರ ಮಾಡಿಕೊಂಡಿದ್ದಾರೆ.ಯಡಿಯೂರಪ್ಪ ಕಾಮಧೇನು ಇದ್ದಂತೆ, 30 ವರ್ಷದಿಂದ ನೋಡುತ್ತಿದ್ದೇನೆ.ಯಡಿಯೂರಪ್ಪ ನವರ ಜೀವ ವಿಜಯೇಂದ್ರನ ಕೈಯಲ್ಲಿ ಇದೆ.ಬಾಲ ನಾಗಮ್ಮನ ಕಥೆಯಂತಾಗಿದೆ ಯಡಿಯೂರಪ್ಪ ಬದುಕು.ಇವತ್ತಿಗೂ ಯಡಿಯೂರಪ್ಪ ನವರ ಬಗ್ಗೆ ನನಗೆ ಕಳಕಳಿ ಇದೆ.ನಾಲಿಗೆ ಕಳೆದುಕೊಂಡ ನಾಯಕ, ಮಾತು ತಪ್ಪಿದ ನಾಯಕನಾಗಿದ್ದಾನೆ ಎಂದು ಕಿಡಿಕಾರಿದರು.

ನಾನು ಯಡಿಯೂರಪ್ಪ ನಾಯಕತ್ವದ ಬಗ್ಗೆ ಅಲ್ಲಅವರ ನಡುವಳಿಕೆ ಬಗ್ಗೆ ಮಾತನಾಡಲು ಜನವರಿ 17 ರಂದು ಅಮಿತ ಶಾ ಬೆಳಗಾವಿ ಭೇಟಿಗೆ ಅವಕಾಶ ಕೇಳಿದ್ದೇನೆ.ಯಾರು ಮಾತನಾಡ್ತಾರೆ ಅವರನ್ನು ವಿಲನ್ ಮಾಡ್ತಾರೆ.ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಬಾರದಾ ಎಂದು ಸಿ.ಪಿ ಯೋಗೇಶ್ವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರಯ,9700 ವೈಯಕ್ತಿಕ ದೂರುಗಳಿವೆ,‌ ಮೆಗಾ ಸಿಟಿ ಹಗರಣ ನಡೆದಿದೆ.ಜನರಿಂದ‌ಹಣ ಪಡೆದು ವಂಚಿಸಿದ್ದಾರೆ, ಅಂತವರು ಮಂತ್ರಿಯಾದ್ರೆ ಹೇಗೆ.? ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತೆರವಾದ್ರೆ ಜೈಲಿಗೆ ಹೋಗ್ತಾರೆ.ಅಂತವರು ಮಂತ್ರಿ ಮಾಡಬೇಕಾ ಎಂದು ಪ್ರಶ್ನಿಸಿದರು.

78 ವರ್ಷದ ಯಡಿಯೂರಪ್ಪ ಅಧಿಕಾದ ವ್ಯಾಮೋಹ ಇರಬೇಕಾದ್ರೆ, 77 ವರ್ಷದ ನನಗೆ ಅಧಿಕಾರದ ವ್ಯಾಮೋಹ ಇದ್ದರೆ ತಪ್ಪೇನು.

ನಾನು ಪಕ್ಷಾಂತರಿ ಅಲ್ಲ. ನಾಯಕತ್ವದ ವಿರುದ್ಧ ಧ್ವನಿ ಎತ್ತಿ ಪಕ್ಷ ಬದಲಿಸಿದ್ದೇನೆ.ನಾನು ಈ ಎಲ್ಲ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಯೋಚನೆಯಲ್ಲಿದ್ದೇನೆ.'ಬಾಂಬೆ-ಡೇಸ್ 'ಪುಸ್ತಕದಲ್ಲಿ ಸರ್ಕಾರ ರಚನೆಯ ಪ್ರಹಸನದ ಬಗ್ಗೆ ಬರೆಯುತ್ತಿದ್ದೇನೆ.

ಇನ್ನು ನಾಲ್ಕೈದು ಅಧ್ಯಾಯಗಳು‌ ಬಾಕಿ ಇದೆ ಎಂದರು.

ಸಾರಾ ಮಹೇಶ್ ಕೊಚ್ಚೆಗುಂಡಿ.ಆ ಕೊಚ್ಚೆಗುಂಡಿಗೆ ಕಲ್ಲು ಎಸೆದು ನಾನೇಕೆ ಹೊಲಸು ಮಾಡ್ಕೊಳ್ಳಿ ಎಂದು ಸಾರಾ ಮಹೇಶ ವಿರುದ್ದ ವಾಗ್ದಾಳಿ‌ ನಡೆಸಿದರು.

ಕೇವಲ ತತ್ವದ ಸಿದ್ದಾಂತದಕ್ಕಾಗಿ ರಾಜಕೀಯ ಮಾಡಲು ಸಾದ್ಯವಿಲ್ಲ. ಅಧಿಕಾರದ ಆಸೆ ಇಲ್ಲ ಅಂತ ನಾನು ಹೇಳುತ್ತಿಲ್ಲ.

ರಾಜಕೀಯದಲ್ಲಿ ಅಧಿಕಾರ ಇಲ್ಲದೆ ಏನೂ ಮಾಡಲು ಸಾಧ್ಯ ವಿಲ್ಲ ಎಂದರು.

ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿಗಾಗಿ ಕಾಗಿನೆಲೆಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಸಿದ್ದರಾಮಯ್ಯ ಮೀಸಲಾತಿ ಹೋರಾಟ ಬೇಡ ಅಂತೀದಾರೆ.ವೀರಶೈವ ಲಿಂಗಾಯತ ಮುಖ್ಯಮಂತ್ರಿಗಳು ಇದ್ಯಾಗೂ 2ಎ ಸೇರಿಸುವಂತೆ ಹೋರಾಟ ನಡೆಸಿದ್ದಾರೆ. ಮೀಸಲಾತಿ ಪಡೆಯಲು ಹೋರಾಟ ನಡೆಸಲೆಬೇಕು. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಯಾಕೆ ಮೀಸಲಾತಿ ಬಗ್ಗೆ ಯೋಚಿಸಲ್ಲ.

ಈಶ್ವರಪ್ಪ ಬೆಳೆದುಬಿಡ್ತಾರೆ ಎಂಬ ಆತಂಕದಿಂದ ವಿರೋಧಿಸುತ್ತಿದ್ದಾರೆ.ಸಿದ್ದರಾಮಯ್ಯ ಏಕಚಕ್ರಾಧಿಪತಿ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.

Edited By : Manjunath H D
Kshetra Samachara

Kshetra Samachara

15/01/2021 10:53 am

Cinque Terre

78.63 K

Cinque Terre

6

ಸಂಬಂಧಿತ ಸುದ್ದಿ