ಕುಂದಗೋಳ : ತಾಲೂಕಿನ 23 ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ಈಗಾಗಲೇ ಮುಕ್ತಾಯ ಕಂಡು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಫಲಿತಾಂಶ ಕೂಡಾ ಹೊರ ಬಿದ್ದು ಪಂಚಾಯಿತಿ ಸದಸ್ಯತ್ವ ಪಡೆದ ಎಲ್ಲರ ಕಣ್ಣು ಈಗ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಕಡೆ ನೆಟ್ಟಿದೆ.
ಸದ್ಯ ಪಂಚಾಯಿತಿ ಗದ್ದುಗೆ ಏರಲು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದ್ದು, ನಾಳೆ ಜನವರಿ 13ರ ಬುಧವಾರದಂದು ಬೆಳಿಗ್ಗೆ 10-30 ಗಂಟೆಗೆ ಕುಂದಗೋಳ ಪಟ್ಟಣದ ಸವಾಯಿ ಗಂಧರ್ವ ಸ್ಮಾರಕದಲ್ಲಿ ಕುಂದಗೋಳ ತಾಲೂಕಿನ 23 ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿಯ ಸಭೆ ನಡೆಸಲಾಗುವುದು.
23 ಗ್ರಾಮ ಪಂಚಾಯತಿಗಳ 380 ಜನ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು ಯಾವ ಪಂಚಾಯಿತಿಗಳಿಗೆ ಯಾವ ಮೀಸಲಾತಿ ಬರುತ್ತೆ ? ಅಧ್ಯಕ್ಷ ಸ್ಥಾನ ಯಾರನ್ನು ಅಲಂಕರಿಸುತ್ತೆ ? ಎಂಬ ಕುತೂಹಲ ಗ್ರಾ.ಪಂಗೆ ಆಯ್ಕೆಯಾದ ಸದಸ್ಯರುಗಳನ್ನು ಕಾಡುತ್ತಲಿದೆ.
Kshetra Samachara
12/01/2021 11:09 am