ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಜೆಪಿ ಮಾನ ಮರ್ಯಾದೆ ಇಲ್ಲ.ಬಂಡಗೆಟ್ಟ ಜನರ ಬಿಜೆಪಿಗರು:ಕನಕಪುರ ಬಂಡೆ ಕಿಡಿ

ಹುಬ್ಬಳ್ಳಿ: ಬಿಜೆಪಿಯವರು ಬಂಡಗೆಟ್ಟ ಜನ, ಇವರಿಗೆ ಯಾವುದೇ ನಾಚಿಕೆ ಮಾನ ಮರ್ಯಾದೆ ಇಲ್ಲ.

ಈ ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲಾ, ರೈತರ ಕಷ್ಟಗಳಿಗೆ ಸ್ಪಂದಿಸಿಲ್ಲಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಂಕಲ್ಪ ಸಮಾವೇಶದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಯಾವ ಕ್ಷೇತ್ರದಲ್ಲಿ ಸೋತ್ತಿದ್ದೆವೆ ಆ ಕ್ಷೇತ್ರದಲ್ಲಿ ನಾವು ಪ್ರವಾಸ ಮಾಡ್ತಿವಿ.ಜನರ ಮಧ್ಯ ಕಾರ್ಯಕ್ರಮವನ್ನು ನಾವು ಮಾಡ್ತೆವಿ.ಮುಂದಿನ ತಿಂಗಳಿನಿಂದ ನಮ್ಮ ಪ್ರವಾಸ ಆರಂಭವಾಗುತ್ತದೆ.

ಮುಂದಿನ ವಿಧಾನಸಭೆ ಟಿಕೆಟ್ ಕೇಳುವವರು ಈಗಿನಿಂದಲೇ ಕ್ಷೇತ್ರದಲ್ಲಿ ಕೆಲಸ ಮಾಡಬೇಕು.

ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.

ಚುನಾವಣೆ ಬಂದಾಗ ಟಿಕೆಟ್ ಕೇಳಿದ್ರೆ ನಾವು ಟಿಕೆಟ್ ನೀಡುವುದಿಲ್ಲ.ಇದು ವಿಧಾನಸಭೆಗೆ ಅಷ್ಟೇ ಅಲ್ಲಾ ಎಲ್ಲಾ ಚುನಾವಣೆಗೆ ಅನ್ವಯಿಸುತ್ತದೆ.ಉತ್ತಮವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ, ಸಕ್ರಿಯವಾಗಿದ್ದವರಿಗೆ ಮಾತ್ರ ವಿಧಾನಸಭೆ ಟಿಕೆಟ್ ನೀಡಲಾಗುತ್ತದೆ.ಹೊಸದಾಗಿ ಚಾಲಕರ ಸಂಘ, ಕಲ್ಚರಲ್ ಸಂಘ, ಸಹಕಾರ ಸಂಘ ಮಾಡ್ತೆವಿ.ಪಕ್ಷ ಸಂಘಟನೆಗೆ ಇದು ಅನುಕೂಲವಾಗುತ್ತದೆ. ಕಾಂಗ್ರೆಸ್ ಶಾಸಕರ ಮನೆಯಲ್ಲಿ‌ ಸಭೆ ನಡೆಸಬಾರದು, ಕಾಂಗ್ರೆಸ್ ಬ್ಲಾಕ್ ಕಚೇರಿಯಲ್ಲಿ ಮಾಡಬೇಕು ಎಂದರು.

ನಮ್ಮ ಪಕ್ಷದಲ್ಲಿ ಯಾವುದೇ ನಾಯಕರಿಲ್ಲಾ, ಇಲ್ಲಿ ಎಲ್ಲರೂ ಕಾರ್ಯಕರ್ತರು ಡಿ.ಕೆ.ಶಿವಕುಮಾರ ಕೂಡ ಒಬ್ಬ ಸಾಮಾನ್ಯ ಕಾರ್ಯಕರ್ತ.ಸರ್ಕಾರ ಇದ್ದಾಗ, ಉಪ ಚುನಾವಣೆ ನಡೆಸುವುದೇ ಬೇರೆ, ಸರ್ಕಾರ ಇಲ್ಲದ ಸಮಯದಲ್ಲಿ ಚುನಾವಣೆ ನಡೆಸುವುದೇ ಬೇರೆ.

ಮುಂದಿನ ಚುನಾವಣೆ ಫಲಿತಾಂಶ ಬರುವವರೆಗೂ ಕಾಯ್ದು ನೋಡಿ ಎಂದ ಅವರು,ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲಾ, ಇಲ್ಲಿ ಎಲ್ಲರೂ ಸೇರಿ ಜಮೀನು ಹುಳಬೇಕಿದೆ ಎಂದು ಅವರು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

11/01/2021 06:47 pm

Cinque Terre

32.54 K

Cinque Terre

3

ಸಂಬಂಧಿತ ಸುದ್ದಿ