ಧಾರವಾಡ: ನನಗೂ ಸಚಿವ ಸ್ಥಾನ ಸಿಕ್ಕರೆ ಒಳ್ಳೆಯದು. ಸರ್ಕಾರ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಂತೂ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ಇದೆ ಸಚಿವ ಸ್ಥಾನ ನೀಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡೋಣ. ಏಳು ಜನರಿಗೆ ಸಚಿವ ಸ್ಥಾನ ಎಂದು ಮಾಧ್ಯಮಗಳಿಂದಲೇ ಗೊತ್ತಾಗಿದೆ. ನಮ್ಮ ನಾಯಕರು ಯಾರನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡುತ್ತಾರೆ ಎಲ್ಲದಕ್ಕೂ ನಾನು ಬದ್ಧ ಎಂದರು.
ಎಲ್ಲ ಎಂಎಲ್ಎಗಳು ಸಚಿವ ಸ್ಥಾನದ ಆಕಾಂಕ್ಷಿ ಇದ್ದೆ ಇರುತ್ತಾರೆ. ಯಾರನ್ನು ತೆಗೆದುಕೊಳ್ಳಬೇಕು ಯಾರನ್ನು ಬಿಡಬೇಕು ಅಂತಾ ನಾಯಕರೇ ನಿರ್ಧಾರ ಮಾಡ್ತಾರೆ. ನನಗಿನ್ನೂ ವಯಸ್ಸಿದೆ, ಪಕ್ಷಕ್ಕಾಗಿ ಮೊದಲಿನಿಂದ ದುಡಿದವರಿಗೆ ಸ್ಥಾನ ಮಾನ ಕೊಡಬೇಕು ಅಂತಾ ಇರುತ್ತೆ ಆದರೆ, ರಾಜಕಾರಣ ಅಂದ್ರೆ ಬ್ಯಾಲೆನ್ಸ್ ಮಾಡಲೇಬೇಕಾಗುತ್ತದೆ ಆ ಬ್ಯಾಲೆನ್ಸ್ ಮಾಡುವ ವಿಚಾರ ಸಿಎಂ ನಿರ್ಧಾರ ಮಾಡುತ್ತಾರೆ ಎಂದರು.
Kshetra Samachara
11/01/2021 02:55 pm