ಕಲಘಟಗಿ: ಕಳೆದ ಚುನಾವಣೆಯ ಸೋಲು ದುಃಖ ತಂದಿರುವುದು ನಿಜ. ಆತ್ಮಾವಲೋಕನ ಮಾಡಿಕೊಂಡಾಗ ನಮ್ಮದೇ ಆದ ಕೆಲವು ತಪ್ಪುಗಳಿಂದ ಸೋಲು ಆಗಿದೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಮಡ್ಕಿಹೊನ್ನಳ್ಳಿಯಲ್ಲಿ ಪಬ್ಲಿಕ್ ನೆಕ್ಸ್ಟ್ ಜತೆ ಮಾತನಾಡಿದ ಅವರು, ಕಲಘಟಗಿ, ಅಳ್ನಾವರ ಭಾಗದ ಜನತೆ ಮುಂದಿನ ಚುನಾವಣೆಯಲ್ಲಿ ಬೆಂಬಲಿಸುವ ಮಾತನಾಡಿದ್ದಾರೆ. ಜನರು ಮತ್ತೆ ನನ್ನ ಹಾಗೂ ಕಾಂಗ್ರೆಸ್ ಪಕ್ಷದ ಕೈಹಿಡಿಯುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಕಲಘಟಗಿ ಕ್ಷೇತ್ರದಲ್ಲಿ ಸ್ಪರ್ಧಿಸುವುದೇ ನನ್ನ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.
Kshetra Samachara
07/01/2021 02:07 pm