ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮಾಜಿ ಸಚಿವ ಸಂತೋಷ ‌ಲಾಡ್ "ಬ್ಯಾಟಿಂಗ್ ಟಿಪ್ಸ್"

ವರದಿ:ಮಲ್ಲಿಕಾರ್ಜುನ ಪುರದನಗೌಡರ

ಕಲಘಟಗಿ:ಮಾಜಿ ಸಚಿವ ಸಂತೋಷ ‌ಲಾಡ್ ಅವರು ಕಲಘಟಗಿ ಕ್ಷೇತ್ರದ ಪ್ರವಾಸದ ವೇಳೆ ಹಳ್ಳಿ ಹುಡುಗರೊಂದಿಗೆ ಕ್ರಿಕೆಟ್ ಆಟವಾಡಿ ಖುಷಿ ಪಟ್ಟರು.

ಮಾಜಿ ಸಚಿವ ಸಂತೋಷ ಲಾಡ್ ಧಾರವಾಡದಿಂದ ಕಡಬಗಟ್ಟಿಗೆ ತೆರಳುವಾಗ ದಾರಿ ಮಧ್ಯೆ ಹುಡುಗರು ಕ್ರಿಕೆಟ್ ಆಟ ಆಡುವುದನ್ನು ನೋಡಿ ತಾವು ಕಾರಿನಿಂದ ಇಳಿದು ಹುಡುಗರೊಂದಿಗೆ ಆಟಕ್ಕಿಳಿದರು.

ಸಂತೋಷ ಲಾಡ್ ಬ್ಯಾಟಿಂಗ್ ಮಾಡಲು ಶುರು ಮಾಡುತ್ತಿದಂತೆ ಹುಡುಗರು ಕೇಕೆ ಸಿಳ್ಳೆ ಹಾಕಿ ಖುಷಿ ಪಟ್ಟರು. ರಾಜಕೀಯ ಹಾಗೂ ತಮ್ಮ ಬ್ಯುಸಿ ಶೆಡ್ಯೂಲ್ ಮಧ್ಯೆ ಲಾಡ್ ಅವರು ಒಂದಿಷ್ಟು ರಿಲ್ಯಾಕ್ಸ್ ಆದಂತೆ ಕಂಡು ಬಂದರು.

ಒಟ್ಟಾರೆ ರಾಜಕೀಯದಾಟದ ನಡುವೆ ಹಳ್ಳಿ ಹುಡುಗರೊಂದಿಗೆ ಕ್ರಿಕೆಟ್ ಆಡಿ ಖುಷಿ ಪಟ್ಟರು.

Edited By : Nagesh Gaonkar
Kshetra Samachara

Kshetra Samachara

06/01/2021 10:16 pm

Cinque Terre

52.22 K

Cinque Terre

11

ಸಂಬಂಧಿತ ಸುದ್ದಿ