ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಆ್ಯಕ್ಟಿವ್ ಆಗಿ ಓಡಾಡುತ್ತಿರುವ ಶರಣು

ಧಾರವಾಡ: ಶರಣಬಸಪ್ಪ ಅಂಗಡಿ ಅವರು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಯಮಿತದ ನಿರ್ದೇಶಕರಾಗಿ ನೇಮಕಗೊಂಡ ನಂತರ ಧಾರವಾಡ ಜಿಲ್ಲೆಯಲ್ಲಿ ಆ್ಯಕ್ಟಿವ್ ಆಗಿ ಓಡಾಡುತ್ತಿದ್ದಾರೆ.

ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳ ಪಡಿತರ ಗೋದಾಮುಗಳಿಗೆ ಅಂಗಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅದೇ ರೀತಿ ಧಾರವಾಡದ ಜ್ಯುಬಿಲಿ ವೃತ್ತದ ಬಳಿ ಇರುವ ಪಡಿತರ ಗೋದಾಮಿಗೆ, ಆಹಾರ ಮತ್ತು ನಾಗರಿಕ ಸರಬರಾಜು ನಿಯಮಿತದ ಜಿಲ್ಲಾ ಮ್ಯಾನೇಜರ್ ರವಿಚಂದ್ರ ಹೊಸಮನಿ ಅವರೊಂದಿಗೆ ಭೇಟಿ ನೀಡಿದ ಅವರು, ಗೋದಾಮಿನಲ್ಲಿ ಯಾವ್ಯಾವ ಧಾನ್ಯ ಎಷ್ಟೆಷ್ಟು ಸ್ಟಾಕ್ ಉಳಿದಿದೆ ಎಂಬುದರ ಕುರಿತು ಮಾಹಿತಿ ಪಡೆದರು.

ಅಕ್ಕಿ, ಕಡಲೆಯನ್ನು ಪರಿಶೀಲಿಸಿದ ಅಂಗಡಿ, ಯಾವ್ಯಾವ ಧಾನ್ಯ ಎಲ್ಲಿಂದ ಬರುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ಪಡೆದರು. ಗೋದಾಮಿನಲ್ಲಿ ಧಾನ್ಯ ಎಷ್ಟು ಶೇಖರಣೆ ಇದೆ ಎಂಬುದರ ಬೋರ್ಡ್ ಕೂಡ ಪರಿಶೀಲಿಸಿ, ಬರುವ ದಿನಗಳಲ್ಲಿ ಧಾರವಾಡದ ಹಳೆಯ ಈ ಗೋದಾಮಿಗೆ ಹೊಸ ಸ್ಪರ್ಶ ನೀಡುವುದಾಗಿಯೂ ತಿಳಿಸಿದರು

Edited By : Nagesh Gaonkar
Kshetra Samachara

Kshetra Samachara

05/01/2021 07:07 pm

Cinque Terre

27.03 K

Cinque Terre

1

ಸಂಬಂಧಿತ ಸುದ್ದಿ