ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಕರ್ನಾಟಕ ಸಂಗ್ರಾಮ ಸೇನೆಯಿಂದ ಗ್ರಾ ಪಂ ನೂತನ ಸದಸ್ಯರಿಗೆ ಸನ್ಮಾನ

ಕಲಘಟಗಿ:ತಾಲೂಕಿನ ತಬಕದಹೊನ್ನಳ್ಳಿ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಕರ್ನಾಟಕ ಸಂಗ್ರಾಮ ಸೇನೆಯಿಂದ ಗ್ರಾ ಪಂ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು.

ಗ್ರಾಮದ ಅಭಿವೃದ್ಧಿಗಾಗಿ ಜಾತಿ,ಮತ ಭೇದ ಮರೆತು ಸರಕಾರದಿಂದ ಬರುವ ಸೌಲಭ್ಯಗಳನ್ನು ಮನೆಮನೆಗೆ ನೀಡುವ‌ ಮೂಲಕ,ಸ್ವಚ್ಛ ಆಡಳಿತ ನಡೆಸಬೇಕೆಂದು ಕರ್ನಾಟಕ ಸಂಗ್ರಾಮ ಸೇನೆಯ ತಾಲೂಕಾ ಅಧ್ಯಕ್ಷ ಸಾತಪ್ಪ ಕುಂಕೂರ ಮಾತನಾಡಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ಉಪಾಧ್ಯಕ್ಷ ಶಂಕರಗೌಡ ಬಾವಿಕಟ್ಟಿ,ನಿತೇಶಗೌಡ ತಡಸ,ಗ್ರಾಮ ಘಟಕದ ಅಧ್ಯಕ್ಷ ಸುಭಾಷ ಕಂಪ್ಲಿಕೊಪ್ಪ,ಸಂತೋಷ, ಬೀರಪ್ಪ ಡೊಳ್ಳಿನ,ಬೂದಪ್ಪ ಲಮಾಣಿ ಹಾಗೂ ಹಿರಿಯರು‌ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

02/01/2021 03:09 pm

Cinque Terre

28.2 K

Cinque Terre

1

ಸಂಬಂಧಿತ ಸುದ್ದಿ