ಧಾರವಾಡ: ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮ ಪಂಚಾಯ್ತಿ ವಾರ್ಡ 5 ರಲ್ಲಿ ತಲಾ 209 ಸಮ ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.
ಮಂಜುನಾಥ ನಿಂಗಪ್ಪ ನಾಯ್ಕರ ಗೆಲುವು ಸಾಧಿಸಿದರು. ಮತ್ತು ಭೀಮಪ್ಪ ಶಿರಗಣ್ಣವರ ಇವರು ಸೋಲು ಅನುಭವಿಸಿದರು. ಈ ಇಬ್ಬರೂ ಅಭ್ಯರ್ಥಿಗಳು ಸಮ ಮತಗಳನ್ನು ಪಡೆದಿದ್ದರಿಂದ ಚುನಾವಣಾಧಿಕಾರಿಗಳು ಲಾಟರಿ ಎತ್ತುವ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಮತ ಎಣಿಕೆಯ ತಾಲೂಕಾ ನೋಡೆಲ್ ಅಧಿಕಾರಿ ವಿನಾಯಕ ಪಾಲನಕರ, ತಹಶೀಲ್ದಾರರಾದ ಪ್ರಕಾಶ ನಾಶಿ, ಶಶಿಧರ ಮಾಡ್ಯಾಳ, ಚುನಾವಣಾಧಿಕಾರಿ ದೊಡಮನಿ, ಹೊಸಮನಿ ಉಪಸ್ಥಿತರಿದ್ದರು.
Kshetra Samachara
30/12/2020 10:38 pm