ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಎರಡನೇ ಬಾರಿಗೆ ಜಯ ಗಳಿಸಿದ ಮಹಾವೀರ

ಧಾರವಾಡ: ಈ ಹಿಂದೆಯೂ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ 4ನೇ ವಾರ್ಡಿನಿಂದ ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿ ಅಧ್ಯಕ್ಷ ಗಾದಿ ಅಲಂಕರಿಸಿದ್ದ ಮಹಾವೀರ ಅಷ್ಟಗಿ ಈ ಬಾರಿಯೂ ಗೆಲುವು ದಾಖಲಿಸುವ ಮೂಲಕ ಮತ್ತೊಮ್ಮೆ ಪಂಚಾಯ್ತಿ ಮೆಟ್ಟಿಲೇರಿದ್ದಾರೆ.

ಉಪ್ಪಿನ ಬೆಟಗೇರಿ ಗ್ರಾಮದ 4ನೇ ವಾರ್ಡಿನಲ್ಲಿ ಸಾಕಷ್ಟು ತುರುಸಿನ ಚುನಾವಣೆ ಜರುಗಿತ್ತು. ಮಹಾವೀರ ಅಷ್ಟಗಿ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. 4ನೇ ವಾರ್ಡಿನಲ್ಲಿ ಒಟ್ಟು ಎರಡು ಮಹಿಳಾ ಸೀಟು ಹಾಗೂ ಒಂದು ಪುರುಷ ಸೀಟು ಮೀಸಲಿದ್ದವು. ಇದರಲ್ಲಿ ಮಹಾವೀರ ಅಷ್ಟಗಿ ಅವರು ಇಬ್ಬರು ಮಹಿಳಾ ಅಭ್ಯರ್ಥಿಗಳನ್ನೊಳಗೊಂಡು ಮೂರು ಜನರ ತಂಡವನ್ನಾಗಿ ಮಾಡಿ ಚುನಾವಣೆ ಮಾಡಿದ್ದರು.

ಈ ಮೂರೂ ಜನ ಅಭ್ಯರ್ಥಿಗಳು ಇದೀಗ ಜಯಗಳಿಸಿದ್ದಾರೆ. ಮಹಾವೀರ ಅಷ್ಟಗಿ ಅವರು ಎರಡನೇ ಬಾರಿಗೆ ಪಂಚಾಯ್ತಿ ಮೆಟ್ಟಿಲೇರಿದ್ದಾರೆ. ಚುನಾವಣೆಗೂ ಮುನ್ನ ಅಷ್ಟಗಿ ಅವರು, ಈ ಹಿಂದೆ ತಾವು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತಮ್ಮ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು 'ಪಬ್ಲಿಕ್ ನೆಕ್ಸ್ಟ್' ಮೂಲಕ ಜನತೆಯ ಮುಂದಿಟ್ಟಿದ್ದರು.

Edited By : Vijay Kumar
Kshetra Samachara

Kshetra Samachara

30/12/2020 09:11 pm

Cinque Terre

26.08 K

Cinque Terre

1

ಸಂಬಂಧಿತ ಸುದ್ದಿ