ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗ್ರಾ.ಪಂ ಮತ ಎಣಿಕೆ 17 ವಾರ್ಡಗಳ ಫಲಿತಾಂಶ ಪ್ರಕಟ

ಕುಂದಗೋಳ : ತಾಲೂಕಿನ 23 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಈಗಾಗಲೇ 17 ವಾರ್ಡಗಳ ಅಭ್ಯರ್ಥಿಗಳ ಫಲಿತಾಂಶ ತಿಳಿದು ಬಂದಿದೆ.

ಗೆದ್ದವರು ಹರಭಟ್ಟ ಕಾಲೇಜು ಮೈದಾನದಲ್ಲಿ ವಿಜಯೋತ್ಸವ ಆಚರಿಸಿ ವಿಕ್ಟರಿ ಚಿಹ್ನೆ ತೋರಿಸಿ ತಮ್ಮ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದರೆ, ತಾಲೂಕು ಆಡಳಿತ ಹೇಳಿದಂತೆ ಮೊದಲ ಹಂತದ ಚುನಾವಣೆ ಫಲಿತಾಂಶ 12 ಬದಲಾಗಿ ಹಿಂದೆ 4 ಗಂಟೆ ತಲುಪುವ ಲಕ್ಷಣಗಳು ಕಾಣುತ್ತಿವೆ.

ಈಗಾಗಲೇ ಎರಡನೇ ಹಂತದ ಮತ ಎಣಿಕೆಗೆ ಕೆಲ ಗ್ರಾಮಗಳ ಅಭ್ಯರ್ಥಿ ಹಾಗೂ ಬೆಂಬಲಿಗರು ಆಗಮಿಸಿ ಹರಭಟ್ಟ ಕಾಲೇಜು ಮೈದಾನದಲ್ಲಿ ಕಾಯುತ್ತಿದ್ದಾರೆ. ಗೆದ್ದವರನ್ನು ಪೊಲೀಸರು ಗ್ರಾಮಗಳಿಗೆ ತೆರಳುವಂತೆ ಸೂಚಿಸಿದ್ದು, ಸದ್ಯದ ವಾತಾವರಣದ ಪ್ರಕಾರ ಚುನಾವಣೆ ಮತ ಎಣಿಕೆ ಶಾಂತವಾಗಿದೆ.

ಮತಗಟ್ಟೆ ಅಧಿಕಾರಿಗಳು ಹಾಗೂ ಪೊಲೀಸರು ಮಧ್ಯಾಹ್ನದ ಊಟ ಸವಿದು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದು ಹರಭಟ್ಟ ಕಾಲೇಜು ಮೈದಾನದಲ್ಲಿ ಜನಸಾಗರ ಬೀಡು ಬಿಟ್ಟಿದೆ.

Edited By : Nagesh Gaonkar
Kshetra Samachara

Kshetra Samachara

30/12/2020 03:06 pm

Cinque Terre

66.11 K

Cinque Terre

6

ಸಂಬಂಧಿತ ಸುದ್ದಿ