ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾಂಗ್ರೆಸ್‌,ಜೆಡಿಎಸ್‌ ರಾಜಕೀಯ ಪತನದತ : ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ನಗರದ ಮೂರುಸಾವಿರ ಮಠದಲ್ಲಿ ಮಾತನಾಡಿದ ಜೋಶಿ ಅಪ್ಪ ನಾಯಕನಾಗಿದ್ದಾನೆ, ನಾನು ಟ್ರೈ ಮಾಡ್ತೇನೆ ಎಂದು ರಾಜಕೀಯಕ್ಕೆ ಬಂದರೆ ಏನಾಗುತ್ತದೆ ಎಂಬುದಕ್ಕೆ ಜೆಡಿಎಸ್‌ ಉದಾಹರಣೆಯಾದರೆ, ಹಣಬಲ ನಂಬುವ ಪಕ್ಷದ ಭವಿಷ್ಯ ಹೇಗಿರಲಿದೆ ಎಂಬುದಕ್ಕೆ ಕಾಂಗ್ರೆಸ್‌ ಉದಾಹರಣೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದ್ದಾರೆ.

ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಬಿಜೆಪಿಯನ್ನು ಜನರು ಒಪ್ಪಿದ್ದಾರೆ.ಬಿಜೆಪಿ ತನ್ನ ವೈಚಾರಿಕತೆಯ ವೈಶಿಷ್ಟ್ಯತೆಯಿಂದಾಗಿ ಶಾಶ್ವತವಾಗಿ ಉಳಿದಿದೆ ಎಂದರು.

ಮಹಾನಗರ ಪಾಲಿಕೆ ಚುನಾವಣೆಗೆ ಈಗಲೆ ಸಿದ್ಧರಾಗಬೇಕಿದೆ. ಈ ಬಾರಿಯೂ ಚುನಾವಣೆ ಗೆಲ್ಲುವ ಅವಕಾಶ ನಮಗಿದ್ದು, ಬೂತ್‌ನಲ್ಲಿ ಕಾರ್ಯಕರ್ತರು ಹೊಣೆ ನಿಭಾಯಿಸಬೇಕು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ ಅರವಿಂದ ಬೆಲ್ಲದ, ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಕ್ರಿಯರಾಗಬೇಕು ಎಂದರು.ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪೂರ್ವ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಪ್ರಭು ನವಲಗುಂದ ಮಠ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಹುಡಾ ಅಧ್ಯಕ್ಷ ನಾಗೇಶ ಕಲಭುರ್ಗಿ, ಜಯತೀರ್ಥ ಕಟ್ಟಿ, ಸತೀಶ ಶೇಜವಾಡಕರ, ಡಿ.ಕೆ. ಚವ್ಹಾಣ ಇತರರಿದ್ದರು.

Edited By : Manjunath H D
Kshetra Samachara

Kshetra Samachara

27/12/2020 11:17 am

Cinque Terre

19.21 K

Cinque Terre

2

ಸಂಬಂಧಿತ ಸುದ್ದಿ