ನವಲಗುಂದ : 2020 ರ ಗ್ರಾಮ ಪಂಚಾಯತ್ ಚುನಾವಣೆ ಮತದಾನ ಭಾನುವಾರದಂದು ನಡೆಯಲಿದ್ದು, ಈಗಾಗಲೇ ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಸಿಬ್ಬಂದಿಗಳು ಆಯಾ ಮತಗಟ್ಟೆಗೆ ಹೋಗಲು ಬಸ್ ಗಳು ಸಜ್ಜಾಗಿ ನಿಂತಿದ್ದವು.
ಹೌದು ಇಂದು ಮಾಂಜಾನೆಯೇ ನವಲಗುಂದದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಸಿಬ್ಬಂದಿಗಳು ಜಮಾ ಆಗಿದ್ದು, ನಾಳೆ ನವಲಗುಂದ ತಾಲೂಕಿನಲ್ಲಿ ಒಟ್ಟು 92 ಬೂತ್ ಗಳಲ್ಲಿ ಮತದಾನ ಜರುಗಲಿದೆ. ಮತ್ತು ಪೊಲೀಸ್ ಬಿಗಿ ಬಂದೂಬಸ್ತ್ ಸಹ ನಿಯೋಜನೆ ಮಾಡಲಾಗಿದ್ದು, ಸರ್ಕಾರದ ಕೊರೋನಾ ಆದೇಶದ ಅನ್ವಯವೇ ಮಾಸ್ಕ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಸಹ ಮಾಡಲಾಗಿದೆ.
Kshetra Samachara
26/12/2020 05:14 pm