ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಭ್ಯರ್ಥಿಗಳ ಭವಿಷ್ಯ ತುಂಬಲು ಹೊರಟ ಮತದಾನದ ಪೆಟ್ಟಿಗೆ

ಕುಂದಗೋಳ : ಧಾರಾವಾಡ ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಡಿ.27 ಭಾನುವಾರ ನಾಳೆಯ ಮತದಾನದ ದಿನಾಂಕ ನಿಗದಿಯಾಗಿದ್ದು, ಈಗಾಗಲೇ ಬಿರುಸಿನ ಪ್ರಚಾರ ಮುಗಿಸಿದ ಅಭ್ಯರ್ಥಿಗಳು ಇಂದು ಮನೆ ಮನೆಗೆ ತೆರಳಿ ಸನ್ನೆಯಲ್ಲಿ ಮತದಾರನ ಕೈ ಕುಲಕುತ್ತಲಿದ್ದಾರೆ.

ಇತ್ತ ನಾಳೆ ನಡೆಯುವ ಮತದಾನಕ್ಕಾಗಿ ಕುಂದಗೋಳ ತಾಲೂಕು ಆಡಳಿತ ಮತಗಟ್ಟೆಗಳ ಸಿದ್ಧತೆಗಾಗಿ ಭರ್ಜರಿ ತಯಾರಿ ಆರಂಭಿಸಿದೆ. ಪಟ್ಟಣದ ಹರಭಟ್ಟ ಕಾಲೇಜು ಆವರಣದಲ್ಲಿನ ತಾಲೂಕಿನ 23 ಗ್ರಾಮ ಪಂಚಾಯಿತಿಗಳ 1301 ಅಭ್ಯರ್ಥಿಗಳ ಭವಿಷ್ಯದ ಮತದಾನಕ್ಕೆ ಆಯಾ ಗ್ರಾಮದ ಮತಗಟ್ಟೆಗಳಿಗೆ ಮತದಾನದ ಪೆಟ್ಟಿಗೆ, ಬ್ಯಾಲೆಟ್ ಪೇಪರ್, ಮತದಾರರ ಪಟ್ಟಿ ಹಾಗೂ ಶಾಹಿ ಸೇರಿದಂತೆ ಇತರ ವಸ್ತುಗಳನ್ನು ಹಾಗೂ ಮತಗಟ್ಟೆ ಅಧಿಕಾರಿಗಳನ್ನು ಕಳುಹಿಸಿ ಕೊಡಲಾಗುತ್ತಿದೆ.

ಸಾಮಾನ್ಯವಾಗಿ 23 ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಹರಭಟ್ಟ ಕಾಲೇಜು ಆವರಣದಲ್ಲಿ ಮತಗಟ್ಟೇ ಅಧಿಕಾರಿಗಳು ಸೇರಿದಂತೆ ತಾಲೂಕು ಆಡಳಿತ ಸಿಬ್ಬಂದಿಗಳು ಹಾಗೂ ತಹಶೀಲ್ದಾರ ಎಲ್ಲರೂ ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಂಡಿದ್ದು, ಸುತ್ತ ಆರಕ್ಷಕರು ಕರ್ತವ್ಯದಲ್ಲಿ ನಿರತರಾಗಿದ್ದಾರೆ. ತಾಲೂಕು ಆಸ್ಪತ್ರೆಯಿಂದ ಸ್ಯಾನಿಟೈಜರ್ ಸಿಂಪಡಣೆ ಮಾಸ್ಕ್ ವಿತರಣೆ ಕೋವಿಡ್ ತಪಾಸಣೆ ಕಾರ್ಯ ನಡೆದಿದೆ.

Edited By : Nagesh Gaonkar
Kshetra Samachara

Kshetra Samachara

26/12/2020 05:07 pm

Cinque Terre

26.92 K

Cinque Terre

1

ಸಂಬಂಧಿತ ಸುದ್ದಿ