ಧಾರವಾಡ: ಪಶ್ಚಿಮ ಪದವೀಧರರ ವಿಧಾನ ಪರಿಷತ್ ಚುನಾವಣೆಗೆ ಧಾರವಾಡದಲ್ಲಿ ಮೊದಲ ನಾಮಪತ್ರ ಸಲ್ಲಿಕೆಯಾಗಿದೆ.
ಉತ್ತರ ಕನ್ನಡ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳು ಈ ಚುನಾವಣೆಗೆ ಒಳಪಡಲಿವೆ. ಅಭ್ಯರ್ಥಿಗಳಿಂದ ಧಾರವಾಡದಲ್ಲೇ ನಾಮಪತ್ರ ಪಡೆಯಲಾಗುತ್ತಿದ್ದು, ಇಂದು ಪರಿಷತ್ ಚುನಾವಣೆಗೆ ಮೊದಲ ನಾಮಪತ್ರ ಸಲ್ಲಿಕೆಯಾಗಿದೆ.
ರವಿ ಶಿವಪ್ಪ ಪಡಸಲಗಿ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಇಂದು ಚುನಾವಣಾಧಿಕಾರಿಗಳೂ ಆಗಿರುವ ಧಾರವಾಡ ಜಿಲ್ಲಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
Kshetra Samachara
05/10/2020 05:02 pm