ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಸಿವಿಲ್ ಆಸ್ಪತ್ರೆ ಮುಂದೆ ಹಠಾತ್ ಪ್ರತಿಭಟನೆ: ಯಾಕೆ ಗೊತ್ತಾ?

ಧಾರವಾಡ: ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಸಾವನ್ನಪ್ಪಿದ್ದು, ಅದಕ್ಕೆ ವೈದ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಬಾಣಂತಿಯ ಸಂಬಂಧಿಕರು, ಕರ್ನಾಟಕ ರಾಷ್ಟ್ರ ಸಮಿತಿ ಸದಸ್ಯರೊಂದಿಗೆ ಕೂಡಿಕೊಂಡು ಆಸ್ಪತ್ರೆ ಎದುರು ಹಠಾತ್ ಪ್ರತಿಭಟನೆ ನಡೆಸಿದರು.

ಧಾರವಾಡ ತಾಲೂಕಿನ ಮುಗದ ಗ್ರಾಮದ ಗರ್ಭಿಣಿಯನ್ನು ಹೆರಿಗೆಗೆ ಎಂದು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ನಿನ್ನೆ ಹೆರಿಗೆಯಾಗಿದ್ದು, ಶಿಶು ಸಾವನ್ನಪ್ಪಿದೆ. ಹೆರಿಗೆ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ನಿರ್ಲಕ್ಷ ವಹಿಸಿದ್ದರಿಂದ ಶಿಶು ಸಾವನ್ನಪ್ಪಿದೆ ಎಂದು ಆರೋಪಿಸಿ ಬಾಣಂತಿಯ ಸಂಬಂಧಿಕರು ಸಿವಿಲ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

Edited By :
Kshetra Samachara

Kshetra Samachara

01/10/2020 07:29 pm

Cinque Terre

17.33 K

Cinque Terre

0

ಸಂಬಂಧಿತ ಸುದ್ದಿ