ಹುಬಳ್ಳಿ- ನಗರದ ಹಲವಾರು ಪ್ರದೇಶದಲ್ಲಿ ಪುಟಪಾತ್ ಒತ್ತುವರಿಯಾಗಿದ್ದರು ಸಹ, ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಯೊಂಡಿಲ್ಲ ಎಂದು ಆರೋಪಿಸಿ ಸಂಗ್ರಾಮ ಸೇನೆ ರಾಜ್ಯಾಧ್ಯಕ್ಷ ಸಂಜು ದುಮ್ಮಕನಾಳ ಮಹನಾಗರ ಪಾಲಿಕೆ ಕಛೇರಿ ಎದುರುಗಡೆ ಏಕಾಂಗಿ ಹೋರಾಟ ನಡೆಸಿದರು.
ಕೋರ್ಟ್ ಸರ್ಕಲ್ ಬಳಿ ಇರುವ, ಸಾಯಿ ಬಾಬಾ ಮಂದಿರದ ಸೇರಿದಂತೆ ನಗರದಲ್ಲಿ ಕೆಲವರು ಪುಟಪಾತ್ ಒತ್ತುವರಿ ಮಾಡಿಕೊಂಡಿದ್ದಾರೆ. ಪಾದಚಾರಿಗಳ ರಸ್ತೆ ತಗದಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಅವ್ಯವಹಾರ ಮಾಡಿದವರ ಮೇಲೆ ಈಗಾಗಲೇ ನೋಟಿಸ್ ನೀಡಿದ್ದರು ಕೂಡಾ, ಯಾವುದೇ ಪ್ರಯೋಜನವಾಗಿಲ್ಲ, ಹೀಗಾಗಿ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಪಾಲಿಕೆಯ ಹೊರಗಡೆ ಫುಟ್ ಪಾತ್ ಮೇಲೆ ಏಕಾಂಗಿ ಮಾಡಬೇಕಾದ ಪ್ರಸಂಗ ಬಂದಿದೆ.
ಇನ್ನೂ ನಮ್ಮ ಮನವಿಗೆ ಸ್ಪಂದನೆ ಮಾಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ದಿಂಡ ನಮಸ್ಕಾರ ಹಾಕುವುದರ ಮೂಲಕ ವಿನೂತನ ಪ್ರತಿಭಟನೆ ಮಾಡಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು....
Kshetra Samachara
21/09/2020 08:42 pm