ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಮಾನದಲ್ಲಿ ತಾಂತ್ರಿಕ ದೋಷ : ಎರಡು ತಾಸು ತಡವಾಗಿ ಸಿಎಂ ಹುಬ್ಬಳ್ಳಿಗೆ ಆಗಮನ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹುಬ್ಬಳ್ಳಿಗೆ ಆಗಮಿಸಬೇಕಿದ್ದ ವಿಶೇಷ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಳಂಬ ಉಂಟಾಗಿದೆ. ಇಂದು ಬೆಳಿಗ್ಗೆ 8.45 ಕ್ಕೆ ಎಚ್ ಎ ಎಲ್ ನಿಂದ ಟೇಕ್ ಆಫ್ ಆಗಿ 9:45 ರ ಸುಮಾರಿಗೆ ಹುಬ್ಬಳ್ಳಿಗೆ

ಆಗಮಿಸಬೇಕಿತ್ತು. ಆದರೆ ಸಿಎಂ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬೆಳಗ್ಗೆ ತಾಂತ್ರಿಕ ದೋಷ ಕಂಡು ಬಂದ ಕಾರಣ ಕ್ಲಿಯರೆನ್ಸ್ ಸಿಗಲಿಲ್ಲ. ಹೀಗಾಗಿ ಇನ್ನೂ ತಡವಾಗುವ ಸಾಧ್ಯತೆ ಹೆಚ್ಚಿದೆ.

ಹೌದು.. ಸಿಎಂ ಬಸವರಾಜ ಬೊಮ್ಮಾಯಿ ಬರಬೇಕಿದ್ದ ವಿಮಾನದ ಬದಲಾವಣೆಯಾಗಿ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಿಂದ ಟೇಕ್ ಆಫ್ ಆಗುವ ಸಾಧ್ಯತೆ ಇದೆ‌. ಬೇರೊಂದು ವಿಮಾನದ ಮೂಲಕ ಹುಬ್ಬಳ್ಳಿಗೆ ಬರುತ್ತಿದ್ದಾರೆ. ಸಿಎಂ ಅವರು ಪ್ರಯಾಣಿಸುತ್ತಿದ್ದ ವಿಮಾನ ಈ ರೀತಿ ತಾಂತ್ರಿಕ ದೋಷ ಕಂಡು ಬಂದಿದ್ದು, ಇದು ಎರಡನೇ ಬಾರಿಯಾಗಿದೆ. ಹಿಂದೊಮ್ಮೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಲ್ಯಾಂಡಿಂಗ್ ಗೆಸಮಸ್ಯೆ ಉಂಟಾಗಿತ್ತು. ಆದರೆ ಈಗ ಟೇಕ್ ಆಫ್ ಸಮಸ್ಯೆ ಕಂಡು ಬಂದಿದೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/12/2021 11:20 am

Cinque Terre

32.01 K

Cinque Terre

2

ಸಂಬಂಧಿತ ಸುದ್ದಿ