ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶ್ರೀ ಜಗದ್ಗುರು ಸಿದ್ಧಾರೂಢರ ಮಠಕ್ಕೆ ಪೇವರ್ಸ್ ದೇಣಿಗೆ ನೀಡಿದ ಅಯ್ಯಪ್ಪ ಶಿರಕೋಳ

ಹುಬ್ಬಳ್ಳಿ: ಕುಸುಗಲ್ ರಸ್ತೆಯಲ್ಲಿರುವ ಶ್ರೀ ಜಗದ್ಗುರು ಸಿದ್ಧಾರೂಢರ ಮಠದಲ್ಲಿ, ಸ್ವಚ್ಚತಾ ಮನೋಭಾವನೆ ಹಿನ್ನೆಲೆಯಲ್ಲಿ, ಸಮಾಜ ಸೇವಕ ಅಯ್ಯಪ್ಪ ಶಿರಕೋಳ ಅವರು ಸಿದ್ಧಾರೂಢರ ಮಠಕ್ಕೆ ಪೇವರ್ಸ್ ಹಾಕಿಸುವ ಮೂಲಕ ತಮ್ಮ ಭಕ್ತಿ ಮೇರೆದಿದ್ದಾರೆ.

ಶ್ರೀ ಜಗದ್ಗುರು ಸಿದ್ಧಾರೂಢರ ಮಠಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ. ಆದ್ರೆ ಸ್ವಲ್ಪ ಮಳೆ ಬಂದ್ರೆ ಸಾಕು ನೀರು ನಿಲ್ಲುತ್ತಿತ್ತು, ಇದನ್ನು ಗಮನಿಸಿದ ಅಯ್ಯಪ್ಪ ಶಿರಕೋಳ ಅವರು, ಸಿದ್ಧಾರೂಢರ ಮಠದ ಉತ್ತರಾಧಿಕಾರಿ ರಮಾನಂದ ಸ್ವಾಮೀಜಿ ಅವರನ್ನು ಭೇಟಿ‌ ಮಾಡಿ, ಪೇವರ್ಸ್ ಕೊಡಿಸಿದ್ದಾರೆ.

ಇನ್ನು ಇವರ ಸಮಾಜ ಸೇವಗೆ ಸಿದ್ಧಾರೂಢರ ಮಠದವರು ಹಾಗೂ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಈಗಾಗಲೇ ಪ್ರತಿ ಸೋಮವಾರ ದಿನದಂದು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗುತ್ತಿದ್ದು, ಈಗ ಅಡುಗೆ ಮಾಡಲು ಉಗ್ರಾಣ ಕೋಣೆ ನಿರ್ಮಾಣ ಮಾಡಲು, ಸಹಾಯದ ಅವಶ್ಯಕತೆ ಇದ್ದು ದಾನಿಗಳು ಸಹಾಯ ಮಾಡುವಂತೆ ಮಠದ ಸ್ವಾಮೀಜಿಯವರು ವಿನಂತೆ ಮಾಡಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

23/09/2022 04:37 pm

Cinque Terre

19.05 K

Cinque Terre

4

ಸಂಬಂಧಿತ ಸುದ್ದಿ