ಧಾರವಾಡ: ಇತ್ತೀಚಿನ ದಿನಗಳಲ್ಲಿ ಮಠಾಧೀಶರು ಹಾಗೂ ರಾಜಕಾರಣಿಗಳ ಮಧ್ಯೆ ಅಪವಿತ್ರ ಮೈತ್ರಿ ಬೆಳೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳು ಆಧ್ಯಾತ್ಮದತ್ತ ಗಮನಹರಿಸಬೇಕು. ಚಿತ್ರದುರ್ಗದ ಮುರುಘಾ ಶರಣರ ಪೊಸ್ಕೊ ಪ್ರಕರಣ ತಾರ್ಕಿಕ ಅಂತ್ಯ ಕಾಣಬೇಕು. ಸ್ವಾಮೀಜಿಯನ್ನು ಪೊಲೀಸರು ತಡವಾಗಿ ಬಂಧಿಸಿದರು. ಇತ್ತೀಚಿನ ಎರಡ್ಮೂರು ದಶಕಗಳಲ್ಲಿ ಮಠಾಧೀಶರು ಹಾಗೂ ರಾಜಕಾರಣಿಗಳ ಮಧ್ಯೆ ಅಪವಿತ್ರ ಮೈತ್ರಿ ಬೆಳೆಯುತ್ತಿದೆ. ಸಂವಿಧಾನದ ಮೌಲ್ಯಗಳಿಗೆ ಈ ಬೆಳವಣಿಗೆ ಅಪಾಯಕಾರಿ ಎಂದರು.
ಸ್ವಾಮೀಜಿಗಳು ಆಧ್ಯಾತ್ಮ ಬಿಟ್ಟು ರಾಜಕಾರಣ ಮಾಡಬಾರದು. 12ನೇ ಶತಮಾನದಲ್ಲಿ ಮೂಢನಂಬಿಕೆ ಹೋಗಲಾಡಿಸಲು ಶರಣರು ಯತ್ನಿಸಿದ್ದರು. ಹಿಂದಿನ ಶರಣರು ಸಾಕಷ್ಟು ಕೆಲಸ ಮಾಡಿದ್ದಾರೆ. ಬಸವ ಪ್ರಶಸ್ತಿ ಘೋಷಿಸಿದ್ದು ಇದೇ ಮುರುಘಾ ಶರಣರು. ಆದರೆ, ಅವರಿಂದಲೇ ಇಂತಹ ಕೆಲಸ ನಡೆದಿದೆ ಎಂದರು.
ಬಿ.ಎಸ್.ಯಡಿಯೂರಪ್ಪ ನಾಚಿಕೆ ಇಲ್ಲದೇ ಮಠಗಳಿಗೆ ಅನುದಾನ ಕೊಟ್ಟರು. ಇಂತಹ ಕೆಲಸ ಮಾಡಬಾರದು. ಇದು ಮಹಾಪರಾಧ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/09/2022 05:38 pm