ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈದ್ಗಾದಲ್ಲಿ ಗಣೇಶೋತ್ಸವಕ್ಕೆ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಕ್ಕೆ ಅನುಮತಿ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರವಾಗಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಕ್ಕೆ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಹಲವಾರು ಅರ್ಜಿಗಳು ಸಿಂಗಲ್ ವಿಂಡೋ ಮೂಲಕ ಸಲ್ಲಿಕೆಯಾಗಿದ್ದು, ಸಂಜೀವ ಬಡಸ್ಕರ್ ಅಧ್ಯಕ್ಷತೆಯ ಸಂಘಟನೆಗೆ ಅವಕಾಶ ನೀಡಲಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹೇಳಿದರು.

ನಗರದಲ್ಲಿಂದು ಸಭೆಯ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈದ್ಗಾದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೋರಿ ಆರು ಸಂಘಟನೆಗಳಿಂದ ಮನವಿ ಸಲ್ಲಿಕೆಯಾಗಿತ್ತು. ಈ ಪೈಕಿ ಸಂಜೀವ್ ಬಡಸ್ಕರ್ ಅಧ್ಯಕ್ಷತೆಯ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಕ್ಕೆ ಅನುಮತಿ ನೀಡಿದ್ದೇವೆ. ಉಳಿದ ಸಂಘಟನೆಗಳು ಈ ಮಹಾಮಂಡಳಕ್ಕೆ ಸಹಕಾರ ನೀಡಲಿವೆ ಎಂದರು.

ನಮ್ಮ ನಿರ್ಧಾರವನ್ನು ಈಗಾಗಲೇ ಪಾಲಿಕೆ ಆಯುಕ್ತರಿಗೆ ತಿಳಿಸಿದ್ದೇವೆ. ಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಲಿದ್ದು, ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕೊಡಲಿದ್ದಾರೆ. ಎಲ್ಲ ಗಣೇಶ ಪ್ರತಿಷ್ಠಾಪನೆ ಮಾನದಂಡಗಳನ್ನೇ ಇದಕ್ಕೂ ಅನ್ವಯಿಸಲಾಗುವುದು ಸಂಬಂಧಪಟ್ಟವರಿಗೆ ಮಾರ್ಗಸೂಚಿಗಳನ್ನು ಆಯುಕ್ತರು ತಿಳಿಸುತ್ತಾರೆ ಎಂದು ಅವರು ಹೇಳಿದರು.

ಇನ್ನೂ ಮೂರು ದಿನಗಳ ಕಾಲ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿದೆ ಈ ಬಗ್ಗೆ ಸಾಕಷ್ಟು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದ್ದು, ಎಲ್ಲರೂ ಸೌಹಾರ್ದತೆಯಿಂದ ಸಹಭಾಗಿತ್ವದಲ್ಲಿ ಗಣೇಶೋತ್ಸವ ನಡೆಯಬೇಕಿದೆ‌ ಎಂದು ಮೇಯರ್ ಮನವಿ ಮಾಡಿದರು.

Edited By :
Kshetra Samachara

Kshetra Samachara

30/08/2022 10:40 pm

Cinque Terre

39.48 K

Cinque Terre

4

ಸಂಬಂಧಿತ ಸುದ್ದಿ