ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಘಟನೆಗೆ ಸಂಬಂಧಿಸಿದಂತೆ ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಹಿಂದೂಗಳನ್ನು ಭಯಭೀತಿಗೊಳಿಸುವ ಉದ್ದೇಶದಿಂದ ಗಲಭೆ ರೂಪಿಸಲಾಗಿದೆ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಎಂಐಎಂ ಹಾಗೂ ಕಾಂಗ್ರೆಸ್ ಪಕ್ಷದ ಕೈವಾಡವಿದ್ದು, ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಹಳ್ಳೂರ, ಅಲ್ತಾಫ್ ನವಾಜ್ ಎಂ. ಕಿತ್ತೂರ ಅವರನ್ನು ಬಂಧಿಸಬೇಕು. ಇವರಿಬ್ಬರು ಕುಮ್ಮಕ್ಕು ನೀಡಿ ಇಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ದೂರಿದರು. ನಗರದ ಎಲ್ಲಾ ಭಾಗಗಳಿಂದ ಜನರು ಗಲಭಗೆ ಬಂದಿದ್ದಾರೆ. ಸರಕಾರ ಗಲಭೆಕೋರರ ವಿರುದ್ಧ ಕೋಟಾ ಕಾಯ್ದೆ ಹೇರಬೇಕು ಎಂದು ಒತ್ತಾಯಿಸಿದ ಅವರು, ಈ ಘಟನೆಗೆ ರಝಾ ಅಕಾಡೆಮಿ ಎಂಬ ಸಂಘಟನೆ ಕೈಜೋಡಿಸಿದೆ .
ಸರ್ಕಾರ ಕಠಿಣವಾದ ಕ್ರಮ ಜರುಗಿಸದಿದ್ದರೇ ಹಿಂದೂಗಳು ಸುಮ್ಮನೆ ಇರುವುದಿಲ್ಲ. ದೇವಸ್ಥಾನದ ಮೇಲಿನ ದಾಳಿ ಘಜ್ನಿ-ಘೋರಿ ಮನಸ್ಥಿತಿ ತೋರುತ್ತದೆ. ಗಲಭೆಗೆ ವಾಟ್ಸಾಪ್ ಸ್ಟೇಟಸ್ ಒಂದು ನೆಪ ಮಾತ್ರ ಮಸೀದಿ ಮೇಲೆ ಭಾಗವಾಧ್ವಜ ಹಾರಿಸಿದರೇ ಏನಾಗುತ್ತದೆ. ಬೆಂಗಳೂರಿನ ಮಸೀದಿ ಮೇಲೆ ಕೇಸರಿ ಧ್ವಜ, ಕೇಸರಿ ಹಿಜಾಬ್ ಹಾಕಿಲ್ಲವೇ ಎಂದು ಪ್ರಶ್ನಿಸಿದರು.
ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ರಿಸ್ಕ್ ತೆಗೆದುಕೊಂಡು ಕಂಟ್ರೋಲ್ ಮಾಡಿದ್ದಾರೆ ಪೊಲೀಸ್ ಕಾರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/04/2022 03:19 pm