ಹುಬ್ಬಳ್ಳಿ: ಮಸೀದಿ ಮೇಲೆ ಹಾಕಲಾಗಿರುವ ಮೈಕ್ ನಿಷೇಧಿಸಬೇಕು ಇಲ್ಲವೇ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು ಎಂಬ ಹೇಳಿಕೆ ನೀಡಿ ರಾಜ್ಯದಲ್ಲಿ ಪ್ರಮೋದ್ ಮುತಾಲಿಕ್ ಹಿಂದೂ ಮುಸ್ಲಿಂ ಸಮುದಾಯದ ಬಾಂಧವ್ಯವನ್ನು ಹಾಳು ಮಾಡುತ್ತಿದ್ದಾರೆ. ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಅಸ್ಪಾಕ್ ಕುಮಟಾಕರ್ ಹೇಳಿದ್ದಾರೆ.
ನಗರದಲ್ಲಿಂದು ಮಾತಾನಾಡಿದ ಅವರು ಪ್ರಮೋದ್ ಮುತಾಲಿಕ್ ಅವರು ಕೇವಲ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಒಂದು ದಿನ ಆದ್ರೂ ಬಡವರಿಗೆ ಸಹಾಯ ಮಾಡವಂತಹ ಒಳ್ಳೆಯ ಕೆಲಸ ಮಾಡಿಲ್ಲ, ನಿಮಗೆ ಈಗಾಗಲೇ ವಯಸ್ಸಾಯಿತು ಇನ್ನಾದ್ರೂ ಸುಧಾರಿಸಿ. ಹಿಜಾಬ್, ಹಲಾಲ್ ಆಯಿತು ಈಗ ಅಜಾನ್ ಮೈಕ್ ಗದ್ದಲ ಎಬ್ಬಿಸುತ್ತಿದ್ದೀರಿ ಇದರಿಂದ ನಿಮಗೆ ಏನು ಲಾಭ ನಾವೆಲ್ಲರೂ ಭಾರತೀಯರು, ಇವೆಲ್ಲವನ್ನೂ ಬಿಟ್ಟು ಮಾನವರಾಗಿ ಬದುಕಿ ಎಂದು ಸಲಹೆ ನೀಡಿ ಎಚ್ಚರಿಕೆ ಸಹ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/04/2022 09:53 pm