ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮತಾಂತರ ನಿಷೇಧ ಕಾಯ್ದೆಗೆ ಕ್ರಿಶ್ಚಿಯನ್ನರ ವಿರೋಧ

ಧಾರವಾಡ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಗೆ ಕ್ರಿಶ್ಚಿಯನ್ನರಿಂದ ವಿರೋಧ ವ್ಯಕ್ತವಾಗಿದೆ.

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಹೋಲಿ ಕ್ರಾಸ್ ಚರ್ಚ್‌ನ ಫಾದರ್‌ಗಳು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ನೆಲದಲ್ಲಿ ಜೀವಿಸುತ್ತಿರುವ ಕ್ರಿಶ್ಚಿಯನ್ನು ಕೇವಲ ಶೇ.3 ರಷ್ಟು ಮಾತ್ರ ಜನಸಂಖ್ಯೆಯನ್ನು ಹೊಂದಿದ್ದಾರೆ. ಈ ಅಂಕಿ, ಸಂಖ್ಯೆಗಳೇ ಕ್ರಿಶ್ಚಿಯನ್ನರು ಮತಾಂತರವನ್ನು ಪ್ರಚೋದಿಸುವುದಿಲ್ಲ, ಬೆಂಬಲಿಸುವುದಿಲ್ಲ ಹಾಗೂ ಮಾಡುವುದಿಲ್ಲ ಎಂಬುದನ್ನು ಒತ್ತಿ ಹೇಳುತ್ತೇವೆ. ಕ್ರೈಸ್ತರಿಂದ ಮತಾಂತರ ನಡೆಯುತ್ತಿದೆ ಎಂದು ಕಪೋಲ ಕಲ್ಪಿತ ಸುದ್ದಿ ಹಲವರಿಂದ ಹಬ್ಬಿಸಲಾಗುತ್ತಿದೆ. ಇದು ನಿಜವಲ್ಲ ಹಾಗೂ ಆಧಾರ ರಹಿತವಾದದ್ದಾಗಿದೆ. ಕೆಲವರು ಅನವಶ್ಯಕವಾಗಿ ಮಾತನಾಡುತ್ತಿರುವ ಆಪಾದನೆಗೆ ಸಮಸ್ತ ಕ್ರೈಸ್ತರನ್ನು ಸಂಶಯದಿಂದ ನೋಡುತ್ತಿರುವುದು ಕ್ರೈಸ್ತ ಸಮುದಾಯಕ್ಕೆ ನೋವುಂಟು ಮಾಡಿದೆ.

ಈ ದೇಶದ ರಕ್ಷಣಾ ವ್ಯವಸ್ಥೆಯ ವಿವಿಧ ಸ್ತರಗಳಲ್ಲಿಯೂ ಕ್ರಿಶ್ಚಿಯನ್ನರು ಎದೆಗೊಟ್ಟು ನಿಂತವರಾಗಿದ್ದಾರೆ. ಪ್ರಸಕ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವುದು ನಮ್ಮ ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ. ಹೀಗಾಗಿ ಸರ್ಕಾರಗಳು ಈ ಕಾಯ್ದೆಯನ್ನು ಜಾರಿಗೆ ತರದಂತೆ ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಕ್ರೈಸ್ತ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

08/12/2021 07:16 pm

Cinque Terre

31.37 K

Cinque Terre

33

ಸಂಬಂಧಿತ ಸುದ್ದಿ