ಹುಬ್ಬಳ್ಳಿ: ಪರಿಹಾರದ ಚೆಕ್ ವಿತರಣೆ ವೇಳೆ ಮಹಿಳೆಯೊಬ್ಬರು ಕುಸಿದು ಬಿದ್ದಿರುವ ಘಟನೆಯೊಂದು ಹುಬ್ಬಳ್ಳಿಯ ಪ್ರವಾಸಿ ಮಂದಿರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸಭೆಯಲ್ಲಿ ನಡೆದಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಸಿ.ಸಿ ಪಾಟೀಲ್, ಹಾಲಪ್ಪ ಆಚಾರ್ ಮುಂದೆ ಘಟನೆ ನಡೆದಿದೆ. ಧಾರವಾಡದ ನಿಗದಿ ಬಳಿ ನಡೆದಿದ್ದ ಕ್ರೂಸರ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ವಿತರಣೆ ವೇಳೆ ಮಹಿಳೆಯೊಬ್ಬಳು ದುಃಖ ತಡೆಯಲಾರದೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಹಿಡಿದು ವಿಶಾಂತ್ರಿಗೆ ವ್ಯವಸ್ಥೆ ಕಲ್ಪಿಸಲಾಯಿತು.
ಪ್ರತಿ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ವಿತರಣೆ ಮಾಡುವ ವೇಳೆ ತಮ್ಮ ಮಗನ ಚೇಕ್ ಪಡೆದುಕೊಳ್ಳುವಾಗ ತಾಯಿ ಸಾವಿತ್ರಿ ಕುಸಿದು ಬಿದ್ದಿದ್ದಾಳೆ. ಸಾವಿತ್ರಿಗೆ ನೀರು ಕುಡಿಸಿದ ಅಧಿಕಾರಿಗಳು ಸಮಾಧಾನ ಪಡಿಸಿದ್ದಾರೆ.
Kshetra Samachara
30/07/2022 04:03 pm