ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಸಮಾಜದ ಸಶಕ್ತೀಕರಣಕ್ಕಾಗಿ ಕೆ.ಕೆ ಫೌಂಡೇಶನ್ ಆರಂಭ

ಅಣ್ಣಿಗೇರಿ: ಸಹಕಾರಿ ಧುರೀಣ ಹಾಗೂ ಯುವ ಮುಖಂಡ ಆರ್.ಕೆ ಪಾಟೀಲ್ ಅವರ ತಂದೆ ದಿ. ಕೃಷ್ಣಗೌಡ ಹಾಗೂ ತಾಯಿ ಕೃಷ್ಣಾಬಾಯಿ ಪಾಟೀಲ್ ಅವರ ಹೆಸರಿನಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಕೌಶಲ್ಯ, ಸ್ತ್ರೀ ಸಬಲೀಕರಣ ಮುಂತಾದ ಉದ್ದೇಶಗಳೊಂದಿಗೆ ಕೆ.ಕೆ ಫೌಂಡೇಶನ್ ಆರಂಭಿಸಿದ್ದಾರೆ.

ಅಣ್ಣಿಗೇರಿ ತಾಲೂಕಿನ ಸ್ವಗ್ರಾಮ ಸಾಸಿವೆಹಳ್ಳಿಯಲ್ಲಿ ಕೆ.ಕೆ ಫೌಂಡೇಶನ್‌ನ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಜಿ.ಬಿ ಗೌಡಪ್ಪಗೋಳ ಫೌಂಡೇಶನ್‌ಅನ್ನು ಉದ್ಘಾಟಿಸಿ, ಸಮಾಜ ಸುಧಾರಣೆಗೆ ಇಂತಹ ಫೌಂಡೇಶನ್‌ಗಳ ಅವಶ್ಯಕತೆ ಇದೆ ಎಂದರು.

ಸರಕಾರಗಳು ಮಾಡಲಾಗದ ಕೆಲಸ ಕಾರ್ಯಗಳು ಇವುಗಳ ಮೂಲಕ ಸಾಧ್ಯ ಆರ್.ಕೆ ಪಾಟೀಲರು ತಮ್ಮ ಅಜ್ಜ ಸಹಕಾರಿ ರಂಗದ ಮೇರು ವ್ಯಕ್ತಿಯ ಆದರ್ಶಗಳನ್ನು ಅಳವಡಿಸಿಕೊoಡು ತಮ್ಮ ತಂದೆ-ತಾಯಿಯ ಹಾದಿಯಲ್ಲಿ ನಡೆಯುತ್ತಿರುವುದು ಇಂದಿನ ಯುವಕರಿಗೆ ಮಾದರಿಯಾಗಿದೆ. ಕೃಷಿಯನ್ನು ಒಂದು ಲಾಭದಾಯಕ ಉದ್ಯಮವನ್ನಗಿಸಬೇಕು. ರೈತರನ್ನು ಕಷ್ಟಗಳಿಂದ ಮುಕ್ತ ಗೊಳಿಸಬೇಕೆಂದು ಗೌಡಪ್ಪಗೋಳ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂದಾನಿಗೌಡ ವಹಿಸಿದ್ದರು. ಕೆ ಕೆ ಫೌಂಡೇಶನ್‌ನ ನಿರ್ಮಾತೃ ಆರ್.ಕೆ ಪಾಟೀಲ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು. ಅಣ್ಣಿಗೇರಿಯ ಶ್ರೋತೃ ಬ್ರಹ್ಮ ಸದ್ಗುರುಗಳು ದಿವ್ಯಸಾನಿಧ್ಯ ವಹಿಸಿದ್ದರು.

Edited By : Nagaraj Tulugeri
Kshetra Samachara

Kshetra Samachara

23/06/2022 04:36 pm

Cinque Terre

14.81 K

Cinque Terre

0

ಸಂಬಂಧಿತ ಸುದ್ದಿ