ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಅಧಿಕಾರಕ್ಕೆ ಉಭಯ ಪಕ್ಷಗಳ ತಿಕ್ಕಾಟ ; ಹೊಸ ಗೇಮ್ ಪ್ಲ್ಯಾನ್ ಮಾಡಿದ ಕಾಂಗ್ರೆಸ್

ಹುಬ್ಬಳ್ಳಿ-ಧಾರವಾಡ ಮಹಾನಗರ ಮೇಯರ್, ಉಪಮೇಯರ್ ಚುನಾವಣೆ ಇದೇ 28 ಕ್ಕೆ ಫಿಕ್ಸ್ ಆಗಿದೆ. ಆದರೆ ಅತ್ತ ಬಿಜೆಪಿ ಪಾಳಯದಲ್ಲಿ ಮೇಯರ್ ಹಾಗೂ ಉಪಮೇಯರ್ ಚುಕ್ಕಾಣಿಗಾಗಿ ತಿಕ್ಕಾಟ ನಡೆದಿದ್ದು, ಇತ್ತ ಕಾಂಗ್ರೆಸ್ ನಲ್ಲೂ ಪಾಲಿಕೆ ಗಾದಿಗಾಗಿ ಆಂತರಿಕ ಕಸರತ್ತು ನಡೆದಿದೆ.

ಹೌದು.. ರಾಜ್ಯ ರಾಜಕೀಯದಂತೆ ಆಪರೇಷನ್ ನಡೆಸಿದೆಯಾ ಕೈಪಡೆ ಎಂಬುವಂತ ವಿಷಯ ಕೇಳಿ ಬಂದಿದ್ದು, ಇತ್ತ ಈಗಾಗಲೇ ಪಾಲಿಕೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹೊಸ್ತಿಲಲ್ಲ ಬಿಜೆಪಿ ನಾಯಕರು ನಿಂತಿದ್ದಾರೆ.

ಒಂದೆಡೆ ಬಿಜೆಪಿ ಸದಸ್ಯರಿಗೆ ಕಾಂಗ್ರೇಸ್ ಪಕ್ಷ ಗಾಳ ಹಾಕುತ್ತಿದೆ. ಈಗಾಗಲೇ ಪಾಲಿಕೆ 82 ಸ್ಥಾನಗಳ ಫೈಕಿ ಬಿಜೆಪಿ 39, ಕಾಂಗ್ರೆಸ್ 33, ಜೆಡಿಎಸ್ 1, ಎಐಎಂಐಎಂ 3 ಹಾಗೂ ಪಕ್ಷೇತರ 6 ಸ್ಥಾನ ಪಡೆದು ಸದಸ್ಯರು ಚುನಾಯಿತರಾಗಿದ್ದಾರೆ. ಇನ್ನೂ ಪಾಲಿಕೆ ಗಾದಿಗೇರಲು ಬೇಕಾಗಿರೋ ಬಹುಮತ 42. ಅದರಂತೆಯೇ ಸ್ಥಳೀಯ ಸಂಸ್ಥೆಯಿಂದ ಚುನಾಯಿತರಾಗಿರೋ 9 ಜನಪ್ರತಿನಿಧಿಗಳಿಂದ ಬೆಂಬಲ ಬೇಕಿದೆ.

ಅಲ್ಲದೇ ಬಿಜೆಪಿಗೆ ಇತ್ತ ಸ್ಥಳೀಯ ಜನಪ್ರತಿನಿಧಿಗಳ‌ ಬೆಂಬಲದ ಬಲ ಸಿಕ್ಕಿದೆ. ಆದರೆ ಅತ್ತ ಬಿಜೆಪಿಯಿಂದ ಅಸಮಾಧಾನಗೊಂಡವರನ್ನೇ ಸೆಳೆಯೋ ತಂತ್ರ ನಡೆಸಿರುವ ಕಾಂಗ್ರೆಸ್ ಪಕ್ಷ ಹೊಸ ಗೇಮ್ ಪ್ಲ್ಯಾನ್ ಮಾಡುತ್ತಿದೆ. ಈ ನಡುವೆ ಮೇಯರ್ ಹಾಗೂ ಉಪಮೇಯರ್ ಗಾದಿಗಾಗಿ ಉಭಯ ಪಕ್ಷಗಳ‌ ನಡುವೆ ಕಸರತ್ತು ನಡೆದಿದ್ದು, ತಿಕ್ಕಾಟದ ನಡುವೆ ಯಾರ ತೆಕ್ಕೆಗೆ ಒಲಿಯಲಿದೆ ಪಾಲಿಕೆ ಚುಕ್ಕಾಣಿ ಎಂಬುವುದನ್ನು ಕಾದು ನೋಡಬೇಕಿದೆ.

Edited By :
Kshetra Samachara

Kshetra Samachara

23/05/2022 01:09 pm

Cinque Terre

40.84 K

Cinque Terre

3

ಸಂಬಂಧಿತ ಸುದ್ದಿ