ತಾಲೂಕಿನಾದ್ಯಂತ ನಿರಂತರ ಮಳೆಗೆ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಂಗಡಿ ಅವರ ನೇತೃತ್ವದಲ್ಲಿ ಹುಬ್ಬಳ್ಳಿ ತಾಲೂಕು ದಂಡಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಮನವಿ ಇಂದು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರಕಾಶ್ ಅಂಗಡಿಯವರು ಪ್ರಕೃತಿಯ ವಿಕೋಪದಿಂದ ತಾಲೂಕಿನಾದ್ಯಂತ ಅತಿಯಾದ ಮಳೆಗೆ ರೈತ ಬೆಳೆದ ಬೆಳೆಗಳು ಮನೆಗೆ ಸಂಪೂರ್ಣ ಹಾಳಾಗಿವೆ, ಹೀಗಾಗಿ ಹಾನಿಗೊಳಗಾದ ಬೆಳೆಗಳಿಗೆ ಶೀಘ್ರ ಪರಿಹಾರ ನೀಡಬೇಕೆಂದು ಜೆಡಿಎಸ್ ಪಕ್ಷದವತಿಯಿಂದ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇನೆ ಎಂದು ತಿಳಿಸಿದರು.
ಇನ್ನೂ ತಾಲೂಕಿನಲ್ಲಿ ಹೆಸರು ಬೆಳೆ ವಿಮೆಯನ್ನು ತುಂಬಿಕೊಳ್ಳುವ ಅವಧಿ ಮುಗಿದು ಹೋಗಿದ್ದರಿಂದ ರೈತರಿಗೆ ಅನಾನುಕೂಲವಾಗಿದೆ ಈಗ ಮತ್ತೆ ಪ್ರಾರಂಭಿಸಬೇಕು ಹಾಗೂ ಪ್ರತಿ ಎಕರೆ ಹೆಸರು ಬೆಳೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಈ ವೇಳೆ ಜೆಡಿಎಸ್ ಸೆಂಟ್ರಲ್ ಕ್ಷೇತ್ರದ ಘಟಕದ ಅಧ್ಯಕ್ಷರಾದ ರಾಜು ನಾಯಕವಾಡಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
11/08/2022 04:46 pm