ಹುಬ್ಬಳ್ಳಿ: ತುಪ್ಪರಿಹಳ್ಳ ಪ್ರವಾಹದಿಂದ ಬೆಣ್ಣಿಹಳ್ಳಕ್ಕೆ ಸೇರುವ ಸುಮಾರು 1.5 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಂಡು ಶ್ರೀ ಯೋಗೇಶ್ವರ ಏತ ನೀರಾವರಿ ಯೋಜನೆ ಮೂಲಕ ಮೊರಬ, ಬ್ಯಾಹಟ್ಟಿ, ಸುಳ್ಳ ಹಾಗೂ ತಿರ್ಲಾಪುರ ಗ್ರಾಮಗಳ 10 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಬ್ಯಾಹಟ್ಟಿಯಲ್ಲಿ ಚಾಲನೆ ನೀಡಿದರು.
ಬ್ಯಾಹಟ್ಟಿ ಗ್ರಾಮದಲ್ಲಿಂದು ವಿದ್ಯುಕ್ತವಾಗಿ ಚಾಲನೆ ನೀಡಿದ ಸಚಿವರು, ಡ್ರೋನ್ ಸಮೀಕ್ಷೆ ಕಾರ್ಯವೈಖರಿಯ ಬಗ್ಗೆ ಏತ ನೀರಾವರಿ ನಕ್ಷೆ ವೀಕ್ಷಣೆ ಮಾಡಿ ಸುರಿಯುವ ಮಳೆಯಲ್ಲಿಯೇ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಈಗಾಗಲೇ ಸುಮಾರು 1.5 ಟಿಎಂಸಿ ನೀರು ಸದ್ಬಳಕೆ ಆಗದೇ ಉಳಿದಿತ್ತು. ಈ ನಿಟ್ಟಿನಲ್ಲಿ ಕೃಷಿಯಲ್ಲಿ ಹೊಸ ಸಂಚಲನ ಸೃಷ್ಟಿಸಿ ಪ್ರವಾಹದ ನೀರನ್ನು ಏತ ನೀರಾವರಿ ಯೋಜನೆ ಮೂಲಕ ರೈತ ಸಮುದಾಯಕ್ಕೆ ಅನುಕೂಲ ಮಾಡುವ ಸದುದ್ದೇಶದಿಂದ 10 ಸಾವಿರ ಹೆಕ್ಟೇರ್ ನೀರಾವರಿಗೆ ಗ್ರೀನ್ ಸಿಗ್ನಲ್ ಕೊಟ್ಟಂತಾಗಿದೆ.
Kshetra Samachara
09/07/2022 06:47 pm