ಕುಂದಗೋಳ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆ ಅದೆಷ್ಟೋ ಸಮಸ್ಯೆ ಸೃಷ್ಟಿಸಿ ತುಸು ತಣ್ಣಗಾಗಿದೆ. ಅತಿವೃಷ್ಟಿ ಸುಳಿಗೆ ಸಿಲುಕಿ ಹಾಳಾದ ಮನೆ ಹಾಗೂ ಕೃಷಿ ಭೂಮಿಗಳನ್ನು ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ವೀಕ್ಷಿಸಿದರು.
ಕುಂದಗೋಳ ತಾಲೂಕಿನ ಬೆಣ್ಣೆ ಹಳ್ಳ, ಗೂಗಿ ಹಳ್ಳದ ಪರಿಸ್ಥಿತಿ ಅವಲೋಕಿಸಿ ತೀವ್ರ ಜಲ ಸಂಕಷ್ಟಕ್ಕೆ ಸಿಲುಕಿದ ಕುಂದಗೋಳ ತಾಲೂಕಿನ ಯರೇಬೂದಿಹಾಳ, ಬೆನಕನಹಳ್ಳಿ, ಮುಳ್ಳೊಳ್ಳಿ, ಹಿರೇಗುಂಜಳ ಗ್ರಾಮಗಳಿಗೆ ಭೇಟಿ ನೀಡಿ ಮನೆ ಬಿದ್ದವರ ಸಮಸ್ಯೆ ಆಲಿಸಿ ಪರಿಹಾರಕ್ಕೆ ತಹಶೀಲ್ದಾರ್ ಹಾಗೂ ನೋಡಲ್ ಅಧಿಕಾರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು.
ಮನೆ ಬಿದ್ದವರಿಗೆ ಧೈರ್ಯ ತುಂಬಿದ ರಮೇಶ್ ಕೊಪ್ಪದ ಪ್ರತಿಯೊಬ್ಬರ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಹಿರಿಯರು ರಮೇಶ್ ಕೊಪ್ಪದ ಕಾರ್ಯ ಮೆಚ್ಚಿ ಅವರು ಸಹ ಅತಿವೃಷ್ಟಿ ಪರಿಹಾರ ವೀಕ್ಷಣೆ ಕಾರ್ಯ ಕೈಗೊಂಡರು. ಕುಂದಗೋಳ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳ ಜೊತೆ ಮನೆ ಬಿದ್ದ ಫಲಾನುಭವಿಗಳ ಸಮೀಕ್ಷೆ ಕೈಗೊಳ್ಳುವಂತೆ ತಿಳಿಸುವುದಾಗಿ ಅತಿವೃಷ್ಟಿ ಸಂಕಷ್ಟಕ್ಕೆ ಒಳಗಾದವರಿಗೆ ತಿಳಿಸಿದರು.
Kshetra Samachara
22/05/2022 09:34 pm