ಹುಬ್ಬಳ್ಳಿ: ನಗರದ ನೃಪತುಂಗ ಬೆಟ್ಟದ ತಪ್ಪಲು ಹಾಗೂ ಧಾರವಾಡದ ಕೌವಲಗೇರಿ ಕಾಣಿಸಿಕೊಂಡ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕುರಿತು ಇಂದು ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬ. ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ಸಭೆ ಜರುಗಿತು. ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್ ಸಭೆಯಲ್ಲಿ ಭಾಗವಹಿಸಿದ್ದರು.
ಗದಗ, ಹಾವೇರಿ, ಕಾರವಾರ ಹಾಗೂ ಕಾಳಿ ಹುಲಿ ರಕ್ಷಿತಾರಣ್ಯದಿಂದ ಹೆಚ್ಚಿನ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೇಂದ್ರೀಯ ವಿದ್ಯಾಲಯದ ಹಳೆಯ ಶಾಲಾ ಕಟ್ಟಡವನ್ನು ಕಾರ್ಯಾಚರಣೆ ನಿಮಿತ್ತ ತೆರವುಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ನೀಡಿದರು.
ನೃಪತುಂಗ ಬೆಟ್ಟ ಹಾಗೂ ಕೆವಲಗೌರಿಯಲ್ಲಿ ಚಿರತೆ ಕಂಡುಬಂದಿರುವುದು ಧೃಡವಾಗಿದೆ. ಎರಡು ಸ್ಥಗಳಲ್ಲಿ ದೊರೆತಿರುವ ಚಿರತೆ ಮಲ ಸಂಗ್ರಹಿಸಿ ಹೈದರಾಬಾದ್‌ಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಪರೀಕ್ಷೆಯ ವರದಿ ನಂತರ ಎರೆಡು ಸ್ಥಳಗಳಲ್ಲಿ ಕಂಡುಬಂದಿರುವ ಚಿರತೆ ಒಂದೇ ಅಥವಾ ಬೇರೆ ಬೇರೆ ಎಂಬುದು ತಿಳಿದು ಬರಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ್ ಕ್ಷೀರಸಾಗರ ಸಭೆಯಲ್ಲಿ ತಿಳಿಸಿದರು.
Kshetra Samachara
25/09/2021 10:14 pm