ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಎಸಿಬಿ ಬ್ಯಾನ್ ಆಗಿದ್ದರಿಂದ ಕಾಂಗ್ರೆಸ್‌, ಸಿದ್ದುಗೆ ಕಪಾಳಮೋಕ್ಷ ಆದಂತಾಗಿದೆ; ಜೋಶಿ

ಧಾರವಾಡ: ಎಸಿಬಿಯನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದ ಹೈಕೋರ್ಟ್ ಆದೇಶವನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದರಿಂದ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರಿಗೆ ಒಂದು ರೀತಿಯಲ್ಲಿ ಕಪಾಳಮೋಕ್ಷವಾದಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟಾಂಗ್ ಕೊಟ್ಟಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೆ ತಂದು ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ಕೊಡಬೇಕು ಎಂದರು.

ಹುಬ್ಬಳ್ಳಿ ಈದ್ಗಾ ಮೈದಾನ ವಿಷಯದ ಬಗ್ಗೆ ಮಾತನಾಡಿದ ಜೋಶಿ, ಅದು ಮಹಾನಗರ ಪಾಲಿಕೆ ಆಸ್ತಿ. ಸುಪ್ರೀಂಕೋರ್ಟ್‌ನಲ್ಲಿ ಆ ಬಗ್ಗೆ ನಿರಂತರವಾಗಿ ನಾನು ಹೋರಾಟ ಮಾಡಿದ್ದೇನೆ. ಅದರ ಕಾನೂನು ಸ್ಥಿತಿಗತಿ ಬಗ್ಗೆ ನನಗೆ ಗೊತ್ತಿದೆ. ವರ್ಷಕ್ಕೆ ಎರಡು ದಿನ ಮೂರ್ನಾಲ್ಕು ಗಂಟೆ ಬಿಟ್ಟರೆ 365 ದಿನವೂ ಅದು ಪಾಲಿಕೆಗೆ ಸೇರಿದ್ದು. ಇದರ ಬಗ್ಗೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಮಹಾನಗರ ಪಾಲಿಕೆಗೆ ಇದೆ ಎಂದರು.

ಜಮೀರ್ ಅಹ್ಮದ್ ಹಾಗೂ ಮತ್ತಿತರರು ನೀಡುವ ಹೇಳಿಕೆಗೆ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ನನಗಿಲ್ಲ. ಕಾನೂನು ಪ್ರಕಾರ ಅಲ್ಲಿನ ಮಹಾನಗರ ಪಾಲಿಕೆಗಳು ಕ್ರಮ ಕೈಗೊಳ್ಳುವ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರನ್ನು ನಾವು ನೀಡಿದ್ದೇವೆ. ಅವರು ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದರು.

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ವಿರೋಧ ಪಕ್ಷದವರು ಅಸ್ಥಿರತೆ ಹುಟ್ಟು ಹಾಕಲು ಇದನ್ನು ಸೃಷ್ಠಿ ಮಾಡಿದ್ದಾರೆ. ಯಡಿಯೂರಪ್ಪನವರಾದಿಯಾಗಿ ಎಲ್ಲ ನಾಯಕರೂ ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆಯಾಗುತ್ತಾರೆ ಎಂಬುದು ಸತ್ಯಕ್ಕೆ ದೂರವಾದದ್ದು ಮತ್ತು ಆಧಾರ ರಹಿತವಾದದ್ದು ಎಂದರು.

ಗರಗ ಖಾದಿ ಕೇಂದ್ರದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜೋಶಿ, ಗರಗದಲ್ಲಿ 10 ಕೋಟಿ ರಾಷ್ಟ್ರಧ್ವಜ ಸಿದ್ಧಪಡಿಸಲು ಆಗುತ್ತಿರಲಿಲ್ಲ. 10 ಕೋಟಿ ಧ್ವಜ ಬೇಕಾಗಿದ್ದರಿಂದ ಬೇರೆ ಧ್ವಜ ಮಾಡುವ ತೀರ್ಮಾನ ತೆಗೆದುಕೊಳ್ಳಲಾಯಿತು. ಖಾದಿ ಕೇಂದ್ರದವರು ಇಲ್ಲಿಯವರೆಗೆ ಮಾಡಿದ ಸೇವೆಯನ್ನು ನಾವು ಸ್ಮರಿಸುತ್ತೇವೆ. ಮುಂದೆಯೂ ಖಾದಿ ಕೇಂದ್ರಗಳ ಬಲವರ್ಧನೆಗೆ ನಮ್ಮ ಸಹಕಾರ ಇದ್ದೇ ಇರುತ್ತದೆ. ಸರ್ಕಾರಿ ಕಚೇರಿಗಳ ಮೇಲೆ ಖಾದಿ ಧ್ವಜಗಳನ್ನೇ ಹಾರಿಸಲಾಗುತ್ತಿದೆ ಎಂದರು.

ಇವತ್ತು ಒಂದೇ ದಿನ 1 ಕೋಟಿ ಧ್ವಜಗಳು ಖರೀದಿಯಾಗಿವೆ. ದೇಶದಲ್ಲಿ ಹೊಸ ಉತ್ಸಾಹ ಮೂಡಿದೆ. ಪ್ರಧಾನಿಗಳ ಕರೆಗೆ ದೊಡ್ಡಮಟ್ಟದಲ್ಲಿ ಸ್ಪಂದನೆ ದೊರೆತಿದೆ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/08/2022 07:32 am

Cinque Terre

43.49 K

Cinque Terre

1

ಸಂಬಂಧಿತ ಸುದ್ದಿ