ಧಾರವಾಡ: ಧಾರವಾಡ ರಾಯಾಪುರದ ಬಳಿ ಇರುವ ಶಾಸಕ ಅರವಿಂದ ಬೆಲ್ಲದ ಮಾಲೀಕತ್ವದ ಕಾರು ಶೋ ರೂಮ್ ಮುಂಭಾಗದ ಜಾಗವನ್ನು ಶಾಸಕರು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಈ ಆರೋಪವನ್ನು ಶಾಸಕ ಅರವಿಂದ ಬೆಲ್ಲದ ಅವರು, ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಕಾರು ಶೋ ರೂಮ್ ಮುಂಭಾಗದ ಜಾಗದಲ್ಲಿ ಪಾಲಿಕೆ ವತಿಯಿಂದ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ಹೀಗೆ ಅಳವಡಿಸಲಾದ ಪೈಪ್‌ಲೈನ್ ಜಾಗವನ್ನು ಶಾಸಕರು ಶೋ ರೂಮ್‌ಗಾಗಿ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಆರೋಪಿಸಿದ್ದರು. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಶಾಸಕ ಅರವಿಂದ ಬೆಲ್ಲದ, ನಮ್ಮ ಶೋ ರೂಮ್ ಜಾಗದಲ್ಲೇ ತಾತ್ಕಾಲಿಕವಾಗಿ ಪೈಪ್‌ಲೈನ್ ಅಳವಡಿಸಲು ಜಾಗ ಕೊಟ್ಟಿದ್ದೇವೆ. ಆ ಪೈಪ್‌ಲೈನ್ ಪದೇ ಪದೇ ಒಡೆಯುತ್ತಿರುವುದರಿಂದ ಅದನ್ನು ಸರ್ಕಾರಿ ಜಾಗಕ್ಕೆ ವರ್ಗಾವಣೆ ಮಾಡುವಂತೆ ಪಾಲಿಕೆಗೆ ಸೂಚಿಸಿದ್ದೇನೆ. ಬಿಆರ್‌ಟಿಎಸ್ ರಸ್ತೆಗೆ ಸಂಬಂಧಿಸಿದಂತೆ ನಮ್ಮ ಜಾಗ ಹೋಗಿದೆ. ಅದಕ್ಕೆ ಪರಿಹಾರ ಕೂಡ ಬಂದಿದೆ. ಆದರೆ, ಈ ಪೈಪ್‌ಲೈನ್ ಅಳವಡಿಕೆಗೆ ಸಂಬಂಧಿಸಿದಂತೆ ನಮಗೆ ಯಾವುದೇ ಪರಿಹಾರ ಬಂದಿಲ್ಲ. ಏಕೆಂದರೆ ಈ ಪೈಪ್‌ಲೈನ್‌ನ್ನು ನಮ್ಮ ಜಾಗದಲ್ಲೇ ಅಳವಡಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಶಾಸಕ ಅರವಿಂದ ಬೆಲ್ಲದ ಅವರು, ಪಾಲಿಕೆಯು ಪೈಪ್‌ಲೈನ್ ಅಳವಡಿಸಿದ ಜಾಗವನ್ನು ಅತಿಕ್ರಮಣ ಮಾಡಿ ಕಂಪೌಂಡ್ ಹಾಕಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಆರೋಪಿಸಿದ್ದರು.
Kshetra Samachara
12/07/2022 10:27 pm