ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸರ್ಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್!

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದ ರವಿ ಮಾಳಗೇರ ಅವರನ್ನು ಅವರಿಗೆ ನೋಟಿಸ್ ಕೊಡದೇ ಸದಸ್ಯತ್ವ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿತ್ತು. ಆದರೆ, ಈ ಪ್ರಕರಣಕ್ಕೆ ಇದೀಗ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಮೊನ್ನೆಯಷ್ಟೇ ಸರ್ಕಾರ ರವಿ ಮಾಳಗೇರ ಅವರಿಗೆ, ಯಾವುದೇ ನೋಟಿಸ್ ಕೊಡದೇ ಸದಸ್ಯತ್ವ ಸ್ಥಾನದಿಂದ ತಮ್ಮನ್ನು ಪದಚ್ಯುತಿಗೊಳಿಸಿರುವುದಾಗಿ ತಿಳಿಸಿತ್ತು. ರವಿ ಅವರು ಈ ಸಂಬಂಧ ಶಾಸಕ ಅರವಿಂದ ಬೆಲ್ಲದ ಅವರನ್ನೂ ಪ್ರಶ್ನೆ ಮಾಡಿದ್ದರಂತೆ. ಆದರೆ, ಶಾಸಕರು ಈ ಬಗ್ಗೆ ನನಗೆ ಗೊತ್ತಿಲ್ಲ ಎಂಬ ಉತ್ತರ ನೀಡಿದ್ದರಂತೆ. ಈ ಎಲ್ಲಾ ಕ್ರಮ ಖಂಡಿಸಿ ರವಿ ಮಾಳಗೇರ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಸರ್ಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿದೆ.

ಕವಿವಿಯಲ್ಲಿ ಹತ್ತು ಹಲವು ಕರ್ಮಕಾಂಡಗಳಿವೆ. ಆರ್ಥಿಕ ಸಂಕಷ್ಟದ ಜೊತೆಗೆ ಕವಿವಿ ಮುಚ್ಚಿ ಹೋಗುವ ಸ್ಥಿತಿಗೆ ಬಂದು ತಲುಪಿದೆ. ಡಾ.ಕೆ.ಬಿ.ಗುಡಸಿ ಎರಡು ವರ್ಷಗಳ ಅವಧಿಯಲ್ಲಿ ಒಂದು ಬಾರಿಯೂ ದೆಹಲಿಗೆ ಹೋಗಿಲ್ಲ. ನಮ್ಮ ವಿವಿಯ ರ‌್ಯಾಂಕ್ ನೂರರಿಂದ 148 ನೇ ಸ್ಥಾನಕ್ಕೆ ಕುಸಿದಿದೆ. ಕವಿವಿಯಲ್ಲಿ ಸಂಪೂರ್ಣವಾಗಿ ಉಸಿರುಗಟ್ಟುವ ವಾತವರಣವಿದೆ. ಐದು ಎಕರೆ ಭೂಮಿಯನ್ನು ಕೇಂದ್ರೀಯ ವಿದ್ಯಾಲಯಕ್ಕೆ ಜಾಗ ಮಂಜೂರು ಮಾಡಿದೆ. 5 ಕೋಟಿ ಬೆಲೆ ಬಾಳುವ ಭೂಮಿ ನಯಾ ಪೈಸೆಯನ್ನೂ ಪಡೆಯದೇ ಮಂಜೂರು ಮಾಡಿದೆ ಎಂದು ರವಿ ಕಿಡಿ ಕಾರಿದರು.

Edited By : Shivu K
Kshetra Samachara

Kshetra Samachara

12/07/2022 02:45 pm

Cinque Terre

25.98 K

Cinque Terre

1

ಸಂಬಂಧಿತ ಸುದ್ದಿ