ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡದ ಶಾರದಾ ಹೈಸ್ಕೂಲ್‌ಗೆ ಬಂದ ಬಸವರಾಜ ಹೊರಟ್ಟಿ ಹಾಗೂ ಮಹಿಳಾ ಪಿಎಸ್ಐ ಕವಿತಾ ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಚುನಾವಣಾಧಿಕಾರಿ ಮಾಡಿದ ಆದೇಶವನ್ನು ತಮ್ಮ ಬೆಂಬಲಿಗರು ಪಾಲನೆ ಮಾಡುತ್ತಿಲ್ಲ. ಮತಗಟ್ಟೆ ಕೇಂದ್ರದಿಂದ 200 ಮೀಟರ್ ದೂರದಲ್ಲಿರಬೇಕು ಎಂದು ಪಿಎಸ್ಐ ಹೇಳುತ್ತಿದ್ದಂತೆ ಹೊರಟ್ಟಿ ಅವರು ಪಿಎಸ್ಐ ಕವಿತಾ ಅವರಿಗೆ ಯಾರ್ರೀ ಅವಾ ಡಿಸಿ? ಎಂದು ಆವಾಜ್ ಹಾಕಿದ್ದಾರೆ.
ಒಂದು ಟೇಬಲ್ ಹಾಗೂ ಎರಡು ಖುರ್ಚಿಗಳನ್ನು ಹಾಕಿಕೊಂಡು ಕುಳಿತುಕೊಳ್ಳಲು ಅವಕಾಶ ಇದೆ. ಜಾಸ್ತಿ ಜನ ಕುಳಿತುಕೊಳ್ಳುವಂತಿಲ್ಲ ಎಂದು ಡಿಸಿ ಹೇಳಿದ್ದಾರೆ ಎಂದು ಪಿಎಸ್ಐ ಹೇಳುತ್ತಿದ್ದಂತೆ ಹೊರಟ್ಟಿ ಯಾರ್ರೀ ಅವಾ ಡಿಸಿ ಎಂದು ಆವಾಜ್ ಹಾಕಿದ್ದಾರೆ.
ಕೊನೆಗೆ, ನಿಮ್ಮ ಕಾನೂನು ಪ್ರಕಾರ ನೀವು ಏನು ಮಾಡಬೇಕೋ ಅದನ್ನು ಮಾಡಿ. ಒಂದು ಟೇಬಲ್, ಎರಡು ಖುರ್ಚಿ ಹಾಕಿಕೊಂಡು ನಮ್ಮವರು ಕುಳಿತುಕೊಳ್ಳುತ್ತಾರೆ ಎಂದು ಹೊರಟ್ಟಿ ಹೇಳಿ ಅಲ್ಲಿಂದ ತೆರಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/06/2022 12:08 pm